ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಕಣ್ಣಿಗೆ ಮಾತ್ರವೇ ಬೀಳಬಲ್ಲಂಥ ಜಗತ್ತಿನ ಅತ್ಯಂತ ಸಣ್ಣದಾದ ನ್ಯಾನೋ-ಫ್ರಿಡ್ಜ್ ಅನ್ನು ಸೃಷ್ಟಿಸಲು ವಿಜ್ಞಾನಿಗಳು ಸಫಲರಾಗಿದ್ದಾರೆ.
ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರ ತಂಡವೊಂದು 100 ನ್ಯಾನೋಮೀಟರ್‌ನಷ್ಟು ಗಾತ್ರ ಇರುವ ಥರ್ಮೋಎಲೆಕ್ಟ್ರಿಕ್ ಕೂಲರ್‌ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.
ಒಂದು ಮಿಲಿಮೀಟರ್ ಅನ್ನು ದಶಲಕ್ಷದಷ್ಟು ಚೂರು ಮಾಡಿದಾಗ ಬರುವ ಗಾತ್ರವೇ ಈ ನ್ಯಾನೋಮಿಟರ್.
ಅಂದಹಾಗೆ ಈ ಫ್ರಿಡ್ಜ್ ಅನ್ನು ಮೊಟ್ಟೆ & ಹಾಲಿನಂಥ ದಿನಸಿಗಳನ್ನು ಇಡಲು ಬಳಸುವಂಥದ್ದಲ್ಲ. ಈ ಸಣ್ಣಾತಿಸಣ್ಣ ಡಿವೈಸ್‌ಗಳನ್ನು, ಕಂಪ್ಯೂಟರ್ ಹಾಗೂ ಫೈಬರ್-ಆಪ್ಟಿಕ್ ನೆಟ್‌ವರ್ಕ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಕೂಲ್ ಮಾಡಲು ಬಳಸಲಾಗುತ್ತದೆ.
ಇಂಥದ್ದೇ ಡಿವೈಸ್‌ಗಳು ನಾಸಾದ ವಾಯೇಜರ್ ಗಗನನೌಕೆಯನ್ನು ಕಳೆದ ನಾಲ್ಕು ದಶಕಗಳಿಂದ ನಡೆಸಲು ಇಂಧನ ಪೂರೈಕೆ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ವಾಹನಗಳ ಹವಾ ನಿಯಂತ್ರಕ ವ್ಯವಸ್ಥೆಗಳ ಒಳಗೆ ಇವುಗಳನ್ನು ಬಳಸುವ ಸಾಧ್ಯತೆಗಳು ಇವೆ.