alex Certify ಇಲ್ಲಿ ಪತ್ತೆಯಾಗಿದೆ ವಿಶ್ವದ ಅತ್ಯಂತ ಹಳೆಯ ಮದ್ಯ ಉತ್ಪಾದನಾ ಘಟಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿ ಪತ್ತೆಯಾಗಿದೆ ವಿಶ್ವದ ಅತ್ಯಂತ ಹಳೆಯ ಮದ್ಯ ಉತ್ಪಾದನಾ ಘಟಕ

ಈಜಿಪ್ಟ್​ನ ಪುರಾತತ್ವ ಇಲಾಖೆಯು ಪ್ರಾಚೀನ ನಗರವಾದ ಅಬಿಡೋಸ್​​ನಲ್ಲಿ ವಿಶ್ವದ ಅತ್ಯಂತ ಹಳೆಯ ಸಾಮೂಹಿಕ ಮದ್ಯ ಉತ್ಪಾದನಾ ಘಟಕವನ್ನ ಪತ್ತೆ ಮಾಡಿದೆ ಎಂದು ವರದಿಯಾಗಿದೆ.

5000 ವರ್ಷಕ್ಕಿಂತ ಹಳೆಯದು ಎಂದು ನಂಬಲಾದ ಈ ಮದ್ಯ ಘಟಕವು ಸಮಾಧಿ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ದೇಶದ ಪ್ರವಾಸಿ ಇಲಾಖೆ ಸಚಿವಾಲಯ ಮಾಹಿತಿ ನೀಡಿದೆ.

ಉತ್ತರ ಅಡೋಬೊಸ್​​ನಲ್ಲಿರುವ ಈ ಪುರಾತನ ತಾಣದಲ್ಲಿ 40 ಮಣ್ಣಿನ ಪಾತ್ರೆಗಳನ್ನ ಗುರುತಿಸಲಾಗಿದೆ. ಈ ಎಲ್ಲದರ ಬಗ್ಗೆ ಈಜಿಪ್ಟ್​ನ ಪ್ರವಾಸೋದ್ಯಮ ಇಲಾಖೆ ಸಚಿವಾಲಯ ಫೇಸ್​ಬುಕ್​ನಲ್ಲಿ ಮಾಹಿತಿ ನೀಡಿದೆ. ಈ ಎಲ್ಲಾ ಪುರಾತನ ತಾಣವನ್ನ ಈಜಿಪ್ಟ್ – ಅಮೆರಿಕದ ಜಂಟಿ ಕಾರ್ಯಾಚರಣೆಯಲ್ಲಿ ಪುರಾತತ್ವ ತಜ್ಞರು ಕಂಡು ಹಿಡಿದಿದ್ದಾರೆ.

ಈ ಸಂಗೀತ ಸಂಯೋಜನೆಗೆ ಬಳಸಲಾದ ವಾದ್ಯವನ್ನ ನೋಡಿದ್ರೆ ಶಾಕ್​ ಆಗ್ತೀರಾ…!

ಈ ಸಾರಾಯಿ 5 ಸಾವಿರ ವರ್ಷಗಳ ಹಿಂದೆ ಈಜಿಪ್ಟ್​ನ್ನು ಆಳಿದ ನಾರ್ಮನ್​ ರಾಜನ ಯುಗಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...