alex Certify ದೆಹಲಿಗಿಂತಲೂ ಮೂರು ಪಟ್ಟ ದೊಡ್ಡದಾದ ಮಂಜುಗಡ್ಡೆ ಫೋಟೋ ಸೆರೆ ಹಿಡಿದ ಉಪಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿಗಿಂತಲೂ ಮೂರು ಪಟ್ಟ ದೊಡ್ಡದಾದ ಮಂಜುಗಡ್ಡೆ ಫೋಟೋ ಸೆರೆ ಹಿಡಿದ ಉಪಗ್ರಹ

ಬರೋಬ್ಬರಿ 4320 ಚದರ ಕಿಲೋಮೀಟರ್​ ಗಾತ್ರದ ಬೃಹತ್​ ಮಂಜುಗಡ್ಡೆಯೊಂದು ಅಂಟಾರ್ಟಿಕಾದಲ್ಲಿ ಮುರಿದು ಬಿದ್ದಿದೆ. ಉಪಗ್ರಹಗಳ ಸಹಾಯದಿಂದ ಈ ಮಂಜುಗಡ್ಡೆಯ ಗಾತ್ರವನ್ನ ಅಳೆಯಲಾಗಿದೆ. ಈ ರೀತಿ ಮುರಿದುಬಿದ್ದ ಈ ಮಂಜುಗಡ್ಡೆಯು ವಿಶ್ವದಲ್ಲೇ ಅತ್ಯಂತ ದೊಡ್ಡದು ಎಂದು ದೃಢೀಕರಿಸಲಾಗಿದೆ.

ಹಿಮ ಬಂಡೆಗಳಿಂದ ಮಂಜುಗಡ್ಡೆಯ ಬೃಹದಾಕಾರದ ತುಂಡುಗಳು ಹಿಮನದಿಯ ಅಂಚಿನಿಂದ ದೂರವಾಗುವ ಪ್ರಕ್ರಿಯೆಯನ್ನ ಐಸ್​ ಕ್ಯಾಲ್ವಿಂಗ್​ ಅಥವಾ ಐಸ್​ಬರ್ಗ್​ ಕ್ಯಾಲ್ವಿಂಗ್​ ಎಂದು ಕರೆಯಲಾಗುತ್ತದೆ.

ಈ ಬೃಹದಾಕಾರದ ಮಂಜುಗಡ್ಡೆಯು ದೆಹಲಿಗಿಂತ ಮೂರು ಪಟ್ಟು ದೊಡ್ಡದಾಗಿದೆ ಎಂದು ಅಂದಾಜಿಸಲಾಗಿದೆ. ಇದು ಸುಮಾರು 170 ಕಿಲೋಮೀಟರ್​ ಉದ್ದ ಹಾಗೂ 25 ಕಿಲೋಮೀಟರ್ ಅಗಲವಾಗಿದೆ.

ಕೋಪರ್ನಿಕಸ್​ ಸೆಂಟಿನೆಲ್​ – 1 ಮಿಷನ್ ಸೆರೆಹಿಡಿದ ಫೋಟೋಗಳಲ್ಲಿ ಈ ಮಂಜುಗಡ್ಡೆಯು ಕಂಡುಬಂದಿದೆ ಎಂದು ಯುರೋಪಿಯನ್​ ಬಾಹ್ಯಾಕಾಶ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಯುರೋಪಿಯನ್​ ಬಾಹ್ಯಾಕಾಶ ಸಂಸ್ಥೆ ತಮ್ಮ ವೆಬ್​ಸೈಟ್​ನಲ್ಲಿ ಫೋಟೋಗಳನ್ನ ಬಿಡುಗಡೆ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...