ದುಬೈ: ತೊಂದರೆಯಲ್ಲಿರುವವರ ಸಹಾಯಾರ್ಥ ಬ್ರಿಟನ್ ಮೂಲದ ದುಬೈ ಚಿತ್ರ ಕಲಾವಿದ ವಿಶ್ವದ ಅತಿ ದೊಡ್ಡ ಕ್ಯಾನ್ವಾಸ್ ಪೇಂಟಿಂಗ್ ರಚನೆ ಪ್ರಾರಂಭಿಸಿದ್ದಾರೆ. ದುಬೈ ಪಾಮ್ ನ ಅಟ್ಲಾಂಟಿಸ್ ಹೋಟೆಲ್ ನ ದೊಡ್ಡ ಕೋಣೆಯಲ್ಲಿ ಸಚಾ ಜಾಫ್ರಿ “ಜರ್ನಿ ಆಫ್ ಹ್ಯುಮ್ಯಾನಿಟಿ” ಎಂಬ ತಲೆಬರಹದ ಈ ಚಿತ್ರ ರಚನೆ ನಡೆಸಿದ್ದಾರೆ.
ಒಟ್ಟು 1800 ಚದರ ಮೀಟರ್ ವಿಸ್ತಾರದ ಚಿತ್ರ ರಚನೆ ಮಾಡಿ, ಗಿನ್ನೆಸ್ ವಿಶ್ವ ದಾಖಲೆ ಮಾಡುವ ಯೋಜನೆ ಅವರದ್ದು. ನಂತರ ಚಿತ್ರವನ್ನು, ತಲಾ 30 ಚದರ ಮೀಟರ್ ಗಳ 60 ವಿಭಾಗ ಮಾಡಿ ಪ್ರತ್ಯೇಕಿಸಿ, ಸಂರಕ್ಷಿಸಲಾಗುವುದು. ಡಿಸೆಂಬರ್ ನಲ್ಲಿ ಅದನ್ನು ಹರಾಜು ಹಾಕಿ, 30 ಮಿಲಿಯನ್ ಡಾಲರ್ ಹಣ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಜಾಫ್ರಿ ತಿಳಿಸಿದ್ದಾರೆ.
ಹರಾಜಿನಿಂದ ಬಂದ ಅಷ್ಟೂ ಹಣವನ್ನು ಕಷ್ಟದಲ್ಲಿದ್ದವರ ಸೇವೆಗೆ ಬಳಸಲಾಗುವುದು. ಚಿತ್ರ ರಚನೆಗೆ ಇತರರೂ ಕೊಡುಗೆ ನೀಡಬಹುದು. ಮಕ್ಕಳು, ಚಿತ್ರ ಕಲಾವಿದರು. ಚಿತ್ರ ರಚಿಸಿದರೆ ಅದನ್ನು ಮೂಲ ಚಿತ್ರದ ಪಕ್ಕ ಅಂಟಿಸಲಾಗುವುದು ಎಂದು ಜಾಫ್ರಿ ಇನ್ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ.
https://www.instagram.com/p/CDgz_1hHPPc/?utm_source=ig_embed
https://www.instagram.com/p/CDiWPS9nrdr/?utm_source=ig_embed