ಪ್ರತಿ ವರ್ಷದಂತೆ ಈ ಬಾರಿಯೂ ಸಹ ನವೆಂಬರ್ 1ರಂದು ವಿಶ್ವ ಸಸ್ಯಹಾರಿ ದಿನವನ್ನು ಆಚರಿಸಲಾಗಿದೆ. ಬ್ರಿಟನ್‌ನಲ್ಲಿ ಸಸ್ಯಹಾರಿಗಳ ಸಂಘದ ಸ್ಥಾಪನೆ ಮಾಡಿದ ದಿನಾಂಕವನ್ನು ಈ ಮೂಲಕ ಆಚರಿಸಲಾಗುತ್ತದೆ.
ಸಸ್ಯಹಾರ ಸೇವನೆಯಿಂದ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವ ಜೊತೆಗೆ ಪ್ರಾಣಿ ದಯೆ ಹಾಗೂ ಪ್ರಕೃತಿ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಅಭಿಯಾನಕ್ಕೆ ಚಾಲನೆ ಕೊಡಲಾಗಿತ್ತು.
ನವೆಂಬರ್ 1944ರಲ್ಲಿ ಈ ಸಂಘವನ್ನು ಸ್ಥಾಪನೆ ಮಾಡಲಾಗಿದ್ದು, 1994ರಲ್ಲಿ ಸಂಘದ ಸುವರ್ಣ ಮಹೋತ್ಸವ ಪ್ರಯುಕ್ತ ಅಂದಿನಿಂದ ನವೆಂಬರ್ 1ರಂದು ವಿಶ್ವ ಸಸ್ಯಹಾರಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಇದೇ ವೇಳೆ ಸಸ್ಯಹಾರಿಗಳು ಎಂಬ ಅರ್ಥವನ್ನೇ ಕೊಡುವ ವೆಗನ್ ಹಾಗೂ ವೆಜಿಟೇರಿಯನ್ ಶಬ್ದಗಳ ನಡುವಿನ ವ್ಯತ್ಯಾಸ ಹೀಗಿದೆ ನೋಡಿ:
ವೆಜಿಟೇರಿಯನ್‌ಗಳು ಎನಿಸಿಕೊಂಡವರು ಪ್ರಮುಖವಾಗಿ ಸಸ್ಯಜನ್ಯ ಮೂಲಗಳನ್ನೇ ಆಹಾರಕ್ಕಾಗಿ ಆಯ್ಕೆ ಮಾಡಿಕೊಂಡರೂ ಸಹ ಪ್ರಾಣಿಗಳ ಮೂಲದಿಂದ ಸಿಗುವ ಜೆನುತುಪ್ಪ, ಮೊಟ್ಟೆ ಹಾಗೂ ಹೈನೋದ್ಯಮದ ಉತ್ಪನ್ನಗಳನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡಿರುತ್ತಾರೆ.
ಮತ್ತೊಂದೆಡೆ, ವೆಗನ್‌ಗಳು ಶುದ್ಧ ಸಸ್ಯಹಾರಿಗಳಾಗಿದ್ದು, ಮಾಂಸ, ಮೊಟ್ಟೆ, ಜೇನುತುಪ್ಪ, ಕ್ಷೀರೋತ್ಪನ್ನಗಳು ಸೇರಿಂತೆ ಪ್ರಾಣಿ ಮೂಲದ ಯಾವುದೇ ಉತ್ಪನ್ನವನ್ನೂ ಸಹ ಸೇವನೆ ಮಾಡುವುದಿಲ್ಲ.