ನಿದ್ದೆ ಒಂದು ಸರಿಯಾಗಿ ಆಯ್ತು ಅಂದರೆ ಇಡೀ ದಿನದ ಕಾರ್ಯಗಳು ಸರಾಗವಾಗಿ ಸಾಗುತ್ತೆ. ಈ ನಿದ್ದೆ ಅನ್ನೋದು ಜೀವನದಲ್ಲಿ ತುಂಬಾನೇ ಮಹತ್ವವಾದದ್ದು. ಹಾಗಂತ ಅತಿ ನಿದ್ದೆ ನಮ್ಮನ್ನ ಸೋಮಾರಿತನಕ್ಕೆ ದೂಡತ್ತೆ ಅನ್ನೋ ಮಾತನ್ನೂ ಮರೆಯೋ ಹಾಗಿಲ್ಲ. ಅಂದಹಾಗೆ ನಾವು ನಿದ್ದೆ ಬಗ್ಗೆ ಮಾತಾಡ್ತಾ ಇರೋದಕ್ಕೆ ಕಾರಣ ಕೂಡ ಇದೆ. ಇಂದು ವಿಶ್ವ ನಿದ್ರೆಯ ದಿನವಂತೆ..!
ವಿಶ್ವದಲ್ಲಿ ಮೊದಲ ಬಾರಿಗೆ 2008ರ ಮಾರ್ಚ್ 14ರಂದು ವಿಶ್ವ ನಿದ್ರಾ ದಿನವನ್ನ ಆಚರಣೆ ಮಾಡಲಾಗಿತ್ತು. ಇದಾದ ಬಳಿಕ ಪ್ರತಿ ವರ್ಷ ವಿಶ್ವದಲ್ಲಿ ನಿದ್ರೆಗೂ ಒಂದು ದಿನವನ್ನ ಮೀಸಲಿಡಲಾಗಿದೆ.
ಪ್ರತಿವರ್ಷವೂ ನಿದ್ರಾ ದಿನದಂದು ಒಂದೊಂದು ಘೋಷವಾಕ್ಯವನ್ನ ತಯಾರು ಮಾಡಲಾಗುತ್ತೆ. ಈ ವರ್ಷದ ನಿಯಮಿತ ನಿದ್ದೆ, ಆರೋಗ್ಯಯುತ ಭವಿಷ್ಯ ಎಂಬ ಧ್ಯೇಯವಾಕ್ಯದೊಂದಿಗೆ ನಿದ್ರಾ ದಿನವನ್ನ ಆಚರಿಸಲಾಗ್ತಿದೆ.
ನಿದ್ರೆಯ ಮಹತ್ವದ ಪ್ರಯುಕ್ತ ಮಹಾತ್ಮರ ಕೆಲ ಪ್ರಮುಖ ಹೇಳಿಕೆಗಳು ಇಲ್ಲಿವೆ ನೋಡಿ.
ನಿದ್ರೆಗೆ ಜಾರುವ ಮುನ್ನ ಮನುಷ್ಯ ತನ್ನೆಲ್ಲ ಕ್ರೋಧವನ್ನ ಮರೆಯಬೇಕು – ಮಹಾತ್ಮಾ ಗಾಂಧಿ
ನಿದ್ರೆ ಒಂದು ಉತ್ತಮ ಔಷಧಿ – ದಲೈ ಲಾಮಾ
ನಿಮ್ಮ ಭವಿಷ್ಯ ನಿಮ್ಮ ಕನಸಿನ ಮೇಲೆ ಅವಲಂಭಿತವಾಗಿದೆ, ಹೀಗಾಗಿ ನಿದ್ದೆ ಮಾಡಿ – ಮೀಸತ್ ಬರಾಜೆನಿ