alex Certify BIG NEWS: ವರದಿಯಾಯ್ತು ವಿಶ್ವದ ಮೊದಲ ಪ್ರಕರಣ – ಕೊರೊನಾದಿಂದ ಗುಣಮುಖನಾಗಿದ್ದವನಿಗೆ ಮತ್ತೆ ಕಾಣಿಸಿಕೊಂಡ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವರದಿಯಾಯ್ತು ವಿಶ್ವದ ಮೊದಲ ಪ್ರಕರಣ – ಕೊರೊನಾದಿಂದ ಗುಣಮುಖನಾಗಿದ್ದವನಿಗೆ ಮತ್ತೆ ಕಾಣಿಸಿಕೊಂಡ ಸೋಂಕು

World's First Confirmed Coronavirus Re-Infection Reported In Hong Kong

ಕೊರೊನಾದಿಂದ ಚೇತರಿಸಿಕೊಂಡ ನಾಲ್ಕೈದು ತಿಂಗಳ ನಂತ್ರ ಮತ್ತೆ 33 ವರ್ಷದ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿದೆ. ಕೋವಿಡ್ -19 ನೆಗೆಟಿವ್ ಪರೀಕ್ಷಿಸಿದ ನಂತರ ಏಪ್ರಿಲ್ ನಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಆಗಸ್ಟ್ 15 ರಂದು ಸ್ಪೇನ್ ನಿಂದ ಯುಕೆ ಮೂಲಕ ಹಾಂಕಾಂಗ್ ಗೆ ಬಂದಿದ್ದ. ಅಲ್ಲಿ ಮತ್ತೆ ಸೋಂಕಿಗೆ ಒಳಗಾಗಿದ್ದಾನೆ.

ಹಾಂಕಾಂಗ್ ವಿಶ್ವವಿದ್ಯಾನಿಲಯದ ಸಂಶೋಧಕರು, ಕೊರೊನಾದಿಂದ ಚೇತರಿಸಿಕೊಂಡು ಮತ್ತೆ ಸೋಂಕಿಗೆ ಒಳಗಾದ ವ್ಯಕ್ತಿ ಆರೋಗ್ಯವಾಗಿದ್ದಾನೆಂದು ಹೇಳಿದ್ದಾರೆ. ಮೊದಲ ಬಾರಿ ಕಾಣಿಸಿಕೊಂಡ ಕೊರೊನಾ ಸೋಂಕಿಗೂ ಈಗ ಕಾಣಿಸಿಕೊಂಡ ಸೋಂಕಿಗೂ ವ್ಯತ್ಯಾಸವಿದೆಯಂತೆ. ದೇಹದಲ್ಲಿ ಯಾವುದೇ ಲಕ್ಷಣವಿಲ್ಲವಂತೆ.

ವಿಶ್ವಾದ್ಯಂತ ಎಂಟು ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಈ ರೋಗವು ಪ್ರತಿರಕ್ಷಣಾ ಶಕ್ತಿ ಹೊಂದಿದ್ದರೂ ಅವ್ರಿಗೂ ಹರಡುತ್ತಲೇ ಇರುತ್ತದೆ ಎಂದಿದ್ದಾರೆ. ಚೀನಾದಲ್ಲೂ ಸೋಂಕಿನಿಂದ ಗುಣಮುಖರಾದವರಿಗೆ ಮತ್ತೆ ಸೋಂಕು ಕಾಣಿಸಿಕೊಂಡ ಪ್ರಕರಣಗಳು ನಡೆದಿವೆ. ಆದ್ರೆ ಮೊದಲ ಸೋಂಕು ಅವ್ರ ದೇಹದಿಂದ ಸಂಪೂರ್ಣ ಹೊರಗೆ ಹೋಗಿತ್ತಾ ಎಂಬ ಪ್ರಶ್ನೆಗೆ ಆಗ ಉತ್ತರ ಸಿಕ್ಕಿರಲಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...