ಜಗತ್ತಿನಲ್ಲಿ ಚಿತ್ರವಿಚಿತ್ರ ಹವ್ಯಾಸ ಹೊಂದಿರುವ ಅನೇಕ ಜನರಿದ್ದಾರೆ. ಕೆಲವೊಂದು ಹವ್ಯಾಸಗಳು ಮೈ ಜುಮ್ಮೆನಿಸಿದ್ರೆ ಮತ್ತೆ ಕೆಲ ಹವ್ಯಾಸಗಳು ಭಯ ಹುಟ್ಟಿಸುತ್ತವೆ. 83 ವರ್ಷದ ಇರಾನಿನ ವ್ಯಕ್ತಿ ಅಮೋ ಹಾಜಿ ಕೂಡ ಅವರಲ್ಲಿ ಒಬ್ಬರು. ಅಮಾ ಕಳೆದ 65 ವರ್ಷಗಳಿಂದ ಸ್ನಾನ ಮಾಡಿಲ್ಲ. ಅಮೋ ವಿಶ್ವದ ಅತ್ಯಂತ ಕೊಳಕು ವ್ಯಕ್ತಿ.
ನೀರು ಕಂಡ್ರೆ ಹೆದರುವ ಅಮೋ, ಇದೇ ಕಾರಣಕ್ಕೆ ಸ್ನಾನ ಮಾಡ್ತಿಲ್ಲ. ಸ್ನಾನ ಮಾಡಿದ್ರೆ ಅನಾರೋಗ್ಯಕ್ಕೊಳಗಾಗ್ತೇನೆ ಎಂಬ ಕಾರಣಕ್ಕೆ ಅಮೋ ಸ್ನಾನ ಮಾಡ್ತಿಲ್ಲ. ಅಮೋ ಇರಾನಿನ ಮರಭೂಮಿಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದಾನೆ. ಆದ್ರೆ ಒಂಟಿತನ ಆತನಿಗೆ ಇಷ್ಟವಿಲ್ಲ. ಪಾಲುದಾರರನ್ನು ಅಮೊ ಹುಡುಕುತ್ತಿದ್ದಾನೆ. ಮರಭೂಮಿಯ ಹೊಂಡದಲ್ಲಿ ಈತ ವಾಸವಾಗಿದ್ದಾನೆ.
ಅಮೊ ಇನ್ನೊಂದು ವಿಷ್ಯದಲ್ಲೂ ವಿಚಿತ್ರವೆನಿಸುತ್ತಾನೆ. ಆತ ತಾಜಾ ಆಹಾರ ಸೇವನೆ ಮಾಡುವ ಬದಲು ಮುಳ್ಳುಹಂದಿ ಕೊಳೆತ ಮಾಂಸ ಸೇವನೆ ಮಾಡ್ತಾನೆ. ಸಿಗರೇಟು ಸೇದುವ ಅಮೊ, ಸಿಗರೇಟು ಖಾಲಿಯಾದ್ರೆ ಪ್ರಾಣಿಗಳ ಮಲವನ್ನು ಒಣಗಿಸಿ ಧೂಮಪಾನಕ್ಕೆ ಬಳಸುತ್ತಾನೆ. ಕೊಳಕಾಗಿರುವುದೇ ನಾನು ಬದುಕಿರಲು ಕಾರಣವೆಂದು ಅಮೊ ಹೇಳಿದ್ದಾನೆ.