alex Certify ಒಳ ಚರಂಡಿ ಕ್ಲೀನ್ ಮಾಡುತ್ತಿದ್ದ ವೇಳೆ ಸಿಕ್ಕಿತೊಂದು ’ಬೃಹತ್‌’ ಇಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಳ ಚರಂಡಿ ಕ್ಲೀನ್ ಮಾಡುತ್ತಿದ್ದ ವೇಳೆ ಸಿಕ್ಕಿತೊಂದು ’ಬೃಹತ್‌’ ಇಲಿ

ಚರಂಡಿಯೊಂದನ್ನು ಸ್ವಚ್ಛಗೊಳಿಸುತ್ತಿದ್ದ ಪೌರ ಕಾರ್ಮಿಕರಿಗೆ ಬೃಹತ್‌ ಗಾತ್ರದ ಇಲಿಯೊಂದು ಕಾಣಿಸಿಕೊಂಡ ಘಟನೆ ಮೆಕ್ಸಿಕೋ ಸಿಟಿಯಲ್ಲಿ ಜರುಗಿದೆ. ಈ ಇಲಿಯು ತಮ್ಮ ದೇಹದ ಮೂರು ಪಟ್ಟು ಗಾತ್ರ ಇರುವುದನ್ನು ಕಂಡ ಕಾರ್ಮಿಕರು ಶಾಕ್ ಆಗಿದ್ದಾರೆ.

ಮೆಕ್ಸಿಕೋ ಸಿಟಿಯ ಚರಂಡಿಗಳಲ್ಲಿ ತುಂಬಿಕೊಂಡಿದ್ದ 22 ಟನ್‌ ಗಳಷ್ಟು ಕಸವನ್ನು ತೆಗೆಯುವುದರಲ್ಲಿ ನಿರತರಾಗಿದ್ದ ಸಿಬ್ಬಂದಿ ದೈತ್ಯ ಇಲಿಯಂತೆ ಕಂಡ ಜೀವಿಯೊಂದನ್ನು ನೋಡಿ ದಂಗು ಬಡಿದಿದ್ದಾರೆ.

ಆದರೆ ಅದರ ಹತ್ತಿರ ಹೋಗಿ ಕಂಡಾಗ ಅದೊಂದು ಹ್ಯಾಲೋವೀನ್ ಪ್ರಾಪ್ ಆಗಿದ್ದು, ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಭಾರೀ ಪ್ರವಾಹದ ವೇಳೆ ಅಲ್ಲಿಂದ ಕೊಚ್ಚಿಕೊಂಡು ಬಂದಿದೆ ಎಂದು ತಿಳಿದಿದೆ. ಈ ಪ್ರಾಪ್‌ ಅನ್ನು ಕ್ಲೀನ್ ಮಾಡುತ್ತಿರುವ ಕೆಲಸಗಾರರ ಪುಟ್ಟದೊಂದು ವಿಡಿಯೋ ವೈರಲ್ ಆಗಿದೆ.

https://www.facebook.com/esernamx/videos/258804388625293

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...