alex Certify ʼನಿವೃತ್ತಿʼ ದಿನದಂದು ಪತ್ರದ ಮೂಲಕ ಬಾಸ್​ ಕ್ರೂರತ್ವವನ್ನ ಬಹಿರಂಗಪಡಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನಿವೃತ್ತಿʼ ದಿನದಂದು ಪತ್ರದ ಮೂಲಕ ಬಾಸ್​ ಕ್ರೂರತ್ವವನ್ನ ಬಹಿರಂಗಪಡಿಸಿದ ಮಹಿಳೆ

ಇನ್ನೇನು ನಿವೃತ್ತಿ ಹೊಂದಲಿದ್ದ ಕ್ಲೀನರ್​ ಒಬ್ಬರು ತಮ್ಮ ಬಾಸ್​​ನ ದುರ್ನಡತೆಯನ್ನ ಪತ್ರದ ಮೂಲಕ ವಿವರಿಸಿದ್ದು ಈ ಪತ್ರವು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಬಾಸ್​ನ ದುರ್ನಡತೆಯಿಂದ ಸೋತು ಹೋಗಿದ್ದ ಕ್ಲೀನರ್​ 35 ವರ್ಷಗಳಿಂದ ತಾನು ಅನುಭವಿಸಿದ ನೋವು ಹಾಗೂ ಹತಾಶೆಗಳನ್ನ ಅಕ್ಷರದ ರೂಪದಲ್ಲಿ ಇಳಿಸಿದ್ದಾಳೆ. ಹೆಚ್​ಎಸ್​ಬಿಸಿ ಬ್ಯಾಂಕ್​ನಲ್ಲಿ ನಿವೃತ್ತಿಯ ಕೊನೆಯ ದಿನದಂದು ಈ ಪತ್ರವನ್ನ ಬರೆದಿದ್ದಾಳೆ.

ನೌಕರರ ಜೊತೆ ದಯೆ ಹಾಗೂ ಗೌರವದಿಂದ ನಡೆದುಕೊಳ್ಳೋದನ್ನ ಕಲಿತುಕೊಳ್ಳಿ ಎಂದು ನಿವೃತ್ತ ಮಹಿಳೆ ಬಾಸ್​ಗೆ ಸಲಹೆ ನೀಡಿದ್ದಾಳೆ.

ಮುಂದೆ ಈ ಬ್ಯಾಂಕ್​ಗೆ ಬರಲಿರುವ ಕ್ಲೀನರ್​ಗಾಗಿ ಬೇಕಾದ ವಸ್ತುಗಳನ್ನ ಪಟ್ಟಿ ಮಾಡಿಟ್ಟಿದ್ದೇನೆ. ನಿಮ್ಮ ಕೋಪ ಹಾಗೂ ಕ್ರೂರ ನಡವಳಿಕೆ ನಿಮ್ಮ ವ್ಯಕ್ತಿತ್ವವನ್ನ ತೋರಿಸುತ್ತೆ ಹೊರತು ನನ್ನ ಗುಣವನ್ನಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ನೀವೆಲ್ಲರೂ ಒಂದು ಮಾತನ್ನ ನೆನಪಿನಲ್ಲಿಡಿ. ಈ ಜಗತ್ತಿನಲ್ಲಿ ನೀವು ಏನು ಬೇಕಿದ್ದರೂ ಆಗಬಹುದು ಆದರೆ ಎಲ್ಲಕ್ಕಿಂತ ಮೊದಲು ದಯಾಮಯಿಯಾಗಿ. ಯಾಕೆಂದರೆ ಕ್ಲೀನರ್​ಗಿಂತ ನೀವ್ಯಾರೂ ಉತ್ತಮರಲ್ಲ ಎಂದು ಬರೆದಿದ್ದಾರೆ.

ಕ್ಲೀನರ್​​ಳ ಪುತ್ರ ಈ ಪತ್ರದ ಫೋಟೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟ ಮೇಲೆ ಆಫೀಸಿನಲ್ಲಿ ಇಂತಹದ್ದೊಂದು ಪತ್ರವಿದೆ ಅನ್ನೋದು ಸಿಬ್ಬಂದಿ ಗಮನಕ್ಕೆ ಬಂದಿದೆ. ಈ ಪತ್ರವನ್ನ ಶೇರ್​ ಮಾಡಿದ ಕ್ಲೀನರ್​ ಪುತ್ರ, ಇದೇ ಕಾರಣಕ್ಕೆ ನಾನು ನಿನ್ನನ್ನ ಪ್ರೀತಿಸುತ್ತೇನೆ ಅಮ್ಮಾ. ಈಕೆ ಕಳೆದ 35 ವರ್ಷಗಳಿಂದ ಬ್ಯಾಂಕ್​ನಲ್ಲಿ ಸ್ವಚ್ಛತಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಳೆ ಹಾಗು ಇಂದು ಮ್ಯಾನೇಜರ್​​ಗೆ ಇಂತಹದ್ದೊಂದು ಪ್ರೀತಿಯ ಪತ್ರವನ್ನ ನೀಡಿದ್ದಾಳೆ. ನಿವೃತ್ತಿ ದಿನದ ಶುಭಾಶಯಗಳು ಅಮ್ಮಾ ಎಂದು ಶೀರ್ಷಿಕೆ ನೀಡಿದ್ದಾರೆ.

ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಕಮೆಂಟ್​ಗಳನ್ನ ಸಂಪಾದಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...