ಕೊರೊನಾ ವೈರಸ್ ಸೋಂಕು ವಿಶ್ವಾದ್ಯಂತ ಲಕ್ಷಾಂತರ ಮಂದಿಗೆ ತಗುಲಿದ್ದು ಈಗಾಗಲೇ 1 ಮಿಲಿಯನ್ ಜೀವಗಳನ್ನ ಬಲಿ ಪಡೆದಿದೆ. ಅನೇಕ ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಆದರೆ ಕೊರೊನಾದಿಂದ ಗುಣಮುಖರಾದ ಬಳಿಕವೂ ಈ ಸೋಂಕು ದೀರ್ಘಾವದಿಯ ಸಮಸ್ಯೆ ನೀಡುತ್ತದೆ ಎಂಬ ಆಘಾತಕಾರಿ ಅಂಶ ಸಮೀಕ್ಷೆಯೊಂದರಲ್ಲಿ ಹೊರಬಿದ್ದಿದೆ.
ಮಹಿಳೆಯರು ಹಾಗೂ ಗರ್ಭಿಣಿಯರಿಗೂ ಕೊರೊನಾ ಅಪಾಯವಿದೆ ಅನ್ನೋದು ಜಗತ್ತಿಗೆ ಗೊತ್ತಿರುವ ಅಂಶವಾಗಿದ್ದರೂ ಸಹ ಒಮ್ಮೆ ವೈರಸ್ಗೆ ತುತ್ತಾದ ಗರ್ಭಿಣಿ ಹಾಗೂ ಸಾಮಾನ್ಯ ಮಹಿಳೆಗೆ ಈ ಸೋಂಕು ದೀರ್ಘಾವದಿ ಸಮಸ್ಯೆ ತಂದೊಡ್ಡಬಹುದು ಎಂಬ ಅಂಶ ಹೊಸ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಮಹಿಳೆಯರ ಆರೋಗ್ಯದ ಪ್ರಮುಖ ಅಂಶವಾದ ಋತುಚಕ್ರದ ಮೇಲೆ ಈ ವೈರಸ್ ಪರಿಣಾಮ ಬೀರುತ್ತದೆಯೇ ಎಂದು ಕೇಳಿದಾಗ ಅನೇಕ ಮಹಿಳೆಯರು ಸರ್ವಾನುಮತದಿಂದ ಹೌದು ಎಂಬ ಉತ್ತರ ನೀಡಿದ್ದಾರೆ.
ಕೊರೊನಾಗೆ ತುತ್ತಾದ ವಿಶ್ವದ ಬಹುತೇಕ ಎಲ್ಲ ಮಹಿಳೆಯರಿಗೆ ಸೋಂಕಿನಿಂದ ಗುಣಮುಖರಾದ ಬಳಿಕ ಮುಟ್ಟಿನ ಚಕ್ರದಲ್ಲಿ ವಿಲಕ್ಷಣ ಪ್ರಭಾವ ಬೀರಿದೆ. ಸೋಂಕಿನಿಂದ ಗುಣಮುಖರಾದ ಬಳಿಕ ಮಹಿಳೆರಲ್ಲಿ ಅನಿಯಮಿತ ಋತುಚಕ್ರ, ಅಧಿಕ ರಕ್ತಸ್ರಾವ ಸೇರಿದಂತೆ ಅನೇಕ ತೊಂದರೆಗಳು ಕಂಡು ಬಂದಿವೆ. ಆದರೆ ಕೊರೊನಾ ಮುಟ್ಟಿನ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅನ್ನೋದು ಸಂಶೋಧನೆ ಬಳಿಕವಷ್ಟೇ ತಿಳಿದು ಬರಬೇಕಿದೆ.