ಮೂರು ದಶಕಗಳ ಹಿಂದೆ ಮಿಸ್ ಆಗಿದ್ದ ತಮ್ಮ ಮದುವೆಯ ಡ್ರೆಸ್ ಅನ್ನು ಮರಳಿ ಪಡೆಯುವಲ್ಲಿ ಕೆನಡಾದ ಇಬ್ಬರು ಮಹಿಳೆಯರು ಸಫಲರಾಗಿದ್ದಾರೆ.
ಜೂನ್ 1989ರಲ್ಲಿ ಮದುವೆಯಾಗಿದ್ದ ಕ್ಯಾಥಿ ಪ್ರಯಾರ್, ತಮ್ಮ ಮದುವೆಯಾದ ಕೂಡಲೇ ಒಂಟಾರಿಯೋದಲ್ಲಿರುವ ಕ್ಯಾಸ್ಕೇಡ್ ಕ್ಲೀನರ‍್ಸ್ ಬಳಿಗೆ ಸ್ವಚ್ಛ ಮಾಡಲು ಕಳುಹಿಸಿದ್ದಾರೆ. ಮದುವೆಯ ಧಿರಿಸಿದ್ದ ಬಾಕ್ಸ್ ಅನ್ನು ಅವರು ಇದುವರೆಗೂ ತೆಗೆದು ನೋಡಿರಲಿಲ್ಲ.
ಡಬ್ಬವನ್ನು ತೆಗೆದು ನೋಡಿದಾಗ ಅದರಲ್ಲಿ ತಮ್ಮ ಮದುವೆ ಬಟ್ಟೆ ಇಲ್ಲದನ್ನು ಕಂಡಿದ್ದಾರೆ ಪ್ರಯಾರ್. ಕೂಡಲೇ ಫೇಸ್ಬುಕ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡ ಪ್ರಯಾರ್, ತಮ್ಮ ಬಟ್ಟೆ ಯಾರ ಬಳಿ ಇದೆಯೋ ಅವರೊಂದಿಗೆ ತಮ್ಮ ಬಳಿ ಇರುವ ಬಟ್ಟೆಯನ್ನು ಅದಲು ಬದಲು ಮಾಡಿಕೊಳ್ಳಬಹುದೇ ಎಂದು ಕೋರಿದ್ದಾರೆ.
ಈ ಪೋಸ್ಟ್ ಅನ್ನು ಓದಿದ ಕಯ್ಲಾ ಹಾಟ್ಸನ್ ಎಂಬಾಕೆ ತನ್ನ ಮದುವೆಗೆ ತನ್ನ ತಾಯಿಯ ಮದುವೆ ಡ್ರೆಸ್ ಹಾಕಿಕೊಳ್ಳಬೇಕೆಂಬ ಕನಸು ಕಂಡಿದ್ದರು. ಆದರೆ, ಮೂರು ದಶಕಗಳ ಹಿಂದೆ ತಮ್ಮಲ್ಲಿದ್ದ ಬಾಕ್ಸ್ ತೆರೆದು ನೋಡಿದಾಗ ಅವರು ಬಹಳ ನಿರಾಶರಾಗಿದ್ದರು. ಇಬ್ಬರೂ ಸಹ ತಂತಮ್ಮ ಬಳಿ ಇದ್ದ ವೆಡ್ಡಿಂಗ್ ಬಟ್ಟೆಗಳ ಫೋಟೋವನ್ನು ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅದೇ ಕ್ಲೀನರ‍್ಸ್ ಶಾಪ್ ಬಳಿ ಸಂಧಿಸಿದ ಇಬ್ಬರೂ ತಮ್ಮ ಬಳಿ ಇದ್ದ ಬಟ್ಟೆಗಳನ್ನು ಅದಲು ಬದಲು ಮಾಡಿಕೊಂಡಿದ್ದಾರೆ.
https://www.facebook.com/permalink.php?story_fbid=10164198827560331&id=670075330
https://www.facebook.com/permalink.php?story_fbid=10164201997200331&id=670075330