ಜೂನ್ 5 ರ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಾನವನ ದುರಾಸೆಗೆ ಪರಿಸರ ದಿನೇ ದಿನೇ ಹಾಳಾಗುತ್ತಿರುವ ಮಧ್ಯೆ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ.
ಪರಿಸರ ನಾಶ ತಡೆಯಲು ಹತ್ತಾರು ಯೋಜನೆಗಳು ಜಾರಿಯಲ್ಲಿವೆ. ಆದ್ರೆ ಯಾವುದೂ ಯಶಸ್ವಿಯಾಗ್ತಿಲ್ಲ. ಹಾಗಾಗಿ ಮೆಕ್ಸಿಕೋದಲ್ಲಿ ಮಹಿಳೆಯರು ಮರಗಳನ್ನೇ ಮದುವೆಯಾಗುತ್ತಾರೆ. ಈ ಮೂಲಕ ಪರಿಸರ ರಕ್ಷಣೆ ಮಾಡೋದು ಅವರ ಉದ್ದೇಶ.
ಓಕ್ಸಾಕ ನಗರದಲ್ಲಿ ಅರಣ್ಯ ಸಂಪೂರ್ಣ ನಾಶವಾಗಿ ಹೋಗ್ತಾ ಇತ್ತು. ದರೋಡೆಕೋರರ ಗುಂಪು ಮರಗಳನ್ನು ಕಡಿದು, ಕಾಡನ್ನು ಬರಿದು ಮಾಡ್ತಿತ್ತು. ಹಾಗಾಗಿ ಮರಗಳ ರಕ್ಷಣೆಗಾಗಿ ಬೇದನಿ ಎಂಬ ಸಂಘಟನೆ ‘ಮ್ಯಾರಿ ಎ ಟ್ರೀ’ ಎಂಬ ಹೊಸ ಆಚರಣೆಯನ್ನು ಪರಿಚಯಿಸಿತ್ತು.
ನಂತರ ಇದು ಸಾಂಪ್ರದಾಯಿಕ ಮದುವೆಯ ರೂಪ ಪಡೆದುಕೊಂಡಿದೆ. ಮಹಿಳೆಯರು ಹಾಗೂ ಪುರುಷರು ಮರಗಳನ್ನು ಮದುವೆಯಾಗುವ ಮೂಲಕ ಪರಿಸರ ರಕ್ಷಣೆ ಮಾಡ್ತಿದ್ದಾರೆ. ಈ ಮದುವೆಗೆ ಕಾನೂನಿನ ಮಾನ್ಯತೆಯಿಲ್ಲ. ಆದ್ರೆ ಇದರ ಹಿಂದೆ ನಿಸರ್ಗದ ಬಗ್ಗೆ ಕಾಳಜಿ ಇರೋದ್ರಿಂದ ವಿರೋಧ ಸಹ ವ್ಯಕ್ತವಾಗಿಲ್ಲ.
https://www.facebook.com/532935180423101/videos/533472460369373/