ಅಮೆರಿಕ ಸಶಸ್ತ್ರ ಪಡೆಗಳಲ್ಲೇ ಅತ್ಯಂತ ಪ್ರತಿಷ್ಠಿತವೆಂದೇ ಹೇಳಲಾದ ನೌಕಾಪಡೆಯ ಮೆರೈನ್ ಕೋರ್‌ನ ಭಾಗವಾಗಿ 53 ಮಹಿಳೆಯರು ನೂತನವಾಗಿ ಸೇರಿಕೊಂಡಿದ್ದಾರೆ.
ಇಲ್ಲಿನ ಸ್ಯಾನ್ ಡಿಯೆಗೋದ ಬೂಟ್ ಕ್ಯಾಂಪ್‌ನಲ್ಲಿ ಮೈಮನಗಳನ್ನು ಅಕ್ಷರಶಃ ಮುರಿದುಹಾಕುವಷ್ಟು ಕ್ಲಿಷ್ಠವಾದ ತರಬೇತಿ ಮುಗಿಸಿರುವ ಈ ಮಹಿಳೆಯರು, 344 ಪುರುಷರೊಂದಿಗೆ ಈ ಕೋರ್ಸ್‌ನಲ್ಲಿ ಭಾಗಿಯಾಗಿದ್ದರು. ಈ ಮಿಶ್ರ ತರಬೇತಿಯಲ್ಲಿ ಆರು ಮಂದಿ ಮಹಿಳಾ ಡ್ರಿಲ್ ತರಬೇತುದಾರರೂ ಇದ್ದರು.
ಇಲ್ಲಿ ಶವದ ಜೊತೆ ನಡೆಯುತ್ತೆ ಮದುವೆ….!
ಅಮೆರಿಕದ ಪಶ್ಚಿಮ ಕರಾವಳಿ ತೀರದಲ್ಲಿ ಮಹಿಳೆಯರನ್ನು ಮೆರೈನ್ ಕೋರ್‌ನ ಭಾಗವಾಗಿ ನೇಮಕ ಮಾಡಿಕೊಳ್ಳುವ ಮೊದಲ ನಿದರ್ಶನ ಇದಾಗಿದ್ದು, ಈ ಮೂಲಕ ಆ ದೇಶದ ಸಶಸ್ತ್ರ ಪಡೆಗಳ ಎಲ್ಲಾ ವಿಭಾಗಗಳಲ್ಲೂ ಸಹ ಮಹಿಳೆಯರ ಪ್ರಾತಿನಿಧ್ಯ ಖಾತ್ರಿಯಾಗಿದೆ ಎಂದು ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಈ ಮುಂಚೆ ಮಹಿಳಾ ಡ್ರಿಲ್ ತರಬೇತುದಾರರು ಹಾಗೂ ಮಹಿಳಾ ಮೆರೈನ್ ಕೋರ್‌ಗಳು ದಕ್ಷಿಣ ಕರೋಲಿನಾದ ಪ್ಯಾರಿಸ್ ದ್ವೀಪದ ಬೂಟ್ ಕ್ಯಾಂಪ್‌ಗಷ್ಟೇ ಸೀಮಿತವಾಗಿದ್ದರು.