ಗರ್ಭಧಾರಣೆ ಅವಧಿಯಲ್ಲಿ ಹೆಂಗಸರು ಹೆಚ್ಚಿನ ತಾಪಮಾನಕ್ಕೆ ಎಕ್ಸ್‌ಪೋಸ್ ಆದಲ್ಲಿ ಅವಧಿಗೂ ಮುಂಚೆ ಮಗು ಹುಟ್ಟುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಜಾಗತಿಕ ತಾಪಮಾನ ಏರಿಕೆ, ಶಾಖದಲೆಗಳು ಹಾಗೂ ಇನ್ನಿತರ ಪರಿಸರ ವಿಕೋಪಗಳ ಕಾರಣದಿಂದ ಉಷ್ಣವಲಯದಲ್ಲಿ ವಾಸಿಸುವ ಬಡ ವರ್ಗದ ಹೆಂಗಸರಲ್ಲಿ ಈ ಸಮಸ್ಯೆಗಳು ಬಹಳ ಸಾಮಾನ್ಯವಾಗುವ ಸಾಧ್ಯತೆ ಇದೆ ಎಂದು ಬಿಎಂಜೆ ಹೆಸರಿನ ವೈದ್ಯಕೀಯ ವೃತ್ತಪತ್ರಿಕೆಯೊಂದು ವರದಿ ಮಾಡಿದೆ.
ಪ್ರತಿ ವರ್ಷ 15 ದಶಲಕ್ಷ ಮಕ್ಕಳು ಅವಧಿಗೂ ಮುನ್ನವೇ ಜನಿಸುತ್ತಿದ್ದು, ಐದು ವರ್ಷದ ಒಳಗಿನ ಮಕ್ಕಳಲ್ಲಿ ಸಾವು ಸಂಭವಿಸಲು ಇದು ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.