
ಹಾಲು ಬಿಳುಪು ಬಣ್ಣದ ಬೆಕ್ಕೊಂದರ ಚಿತ್ರವೊಂದನ್ನು ಅದರ ಮಾಲಕಿ ಸಖತ್ತಾಗಿ ಟೈಮ್ ಮಾಡಿದ್ದು ಅದೀಗ ಮೋಡದ ಮೇಲಿಂದ ಕಾಣುವಂತೆ ನೇತ್ರಭ್ರಮೆ ಸೃಷ್ಟಿಸುತ್ತಿದೆ.
ಕಿಟಕಿ ಪಕ್ಕ ಕುಳಿತು ಆಚೆ ನೋಡುತ್ತಿರುವ ಬೆಕ್ಕಿನ ಈ ಚಿತ್ರದಲ್ಲಿ ಮೋಡಗಳ ಪ್ರತಿಫಲನ ಬಿದ್ದಿದ್ದು, ಅದೆಲ್ಲೋ ಮೋಡದ ನಡುವೆ ಆಡಿಕೊಂಡು ಕುಳಿತಂತೆ ಕಾಣುತ್ತಿದೆ.
ಅಮಾಂಡಾ ಹಿಸ್ಲಾಪ್ ಎಂಬ ವ್ಯಕ್ತಿಯ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಚಿತ್ರವನ್ನು ಅದಾಗಲೇ ಎರಡು ಲಕ್ಷಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದು, ಅದಕ್ಕಿಂತ ದೊಡ್ಡ ಸಂಖ್ಯೆಯಲ್ಲಿ ಜನರು ಪ್ರತಿಕ್ರಿಯಿಸುತ್ತಿದ್ದಾರೆ.