ಮದುವೆ ದಿನ ತಾನು ಎಲ್ಲರಿಗಿಂತ ಚೆನ್ನಾಗಿ ಕಾಣಬೇಕು ಎಂಬ ಹೆಬ್ಬಯಕೆ ಯಾವ ವಧುವಿಗೆ ಇರೋದಿಲ್ಲ ಹೇಳಿ. ಮದುವೆಗೆ ಬಂದ ಅತಿಥಿಗಳೆಲ್ಲ ಮಧುಮಗಳ ಸೌಂದರ್ಯವನ್ನ ಹೊಗಳಿಬಿಟ್ಟರೆ ಆಕೆಯ ಸಂತಸಕ್ಕೆ ಪಾರವೇ ಇರೋದಿಲ್ಲ.
ಆದರೆ ಮಹಿಳೆಯೊಬ್ಬರು ರೆಡಿಟ್ನಲ್ಲಿ ತಮ್ಮ ಮದುವೆಯಲ್ಲಿ ಆದ ಅನುಭವ ಏನೆಂಬುದನ್ನ ಶೇರ್ ಮಾಡಿದ್ದಾರೆ. ತನ್ನ ಪತಿಯಾಗುವವನ ಸಹೋದರಿ ಹೇಗೆ ತನ್ನ ಎಲ್ಲಾ ಸ್ಟೈಲ್ಗಳನ್ನ ಕಾಪಿ ಮಾಡಿದ್ದಳು ಅನ್ನೋದನ್ನ ವಿವರಿಸಿದ್ದಾರೆ.
ವಧು ವರನ ಜೊತೆ ಮದುವೆ ನಿಶ್ಚಯ ಮಾಡಿಕೊಳ್ಳುತ್ತಿದ್ದಂತೆಯೇ ಆತನ ಸಹೋದರಿ ಅಸೂಯೆ ಬುದ್ಧಿಯನ್ನ ತೋರಿಸೋಕೆ ಶುರುಮಾಡಿದ್ದಳಂತೆ. ಇದೇ ರೀತಿ ತನ್ನ ಎಂಗೆಂಜ್ಮೆಂಟ್ ರಿಂಗ್, ಮದುವೆ ಉಡುಪು ಸೇರಿದಂತೆ ಎಲ್ಲಾ ವಸ್ತುಗಳನ್ನ ಆಕೆಯೂ ಸಹ ಖರೀದಿ ಮಾಡಿದ್ದಳು ಎಂದು ವಧು ಹೇಳಿದ್ದಾಳೆ.
ಕೆಲ ವರ್ಷಗಳ ಹಿಂದೆ ನನ್ನ ಮದುವೆಯಾಗುವ ಯುವಕ ನನಗೆ ಉಂಗುರವನ್ನ ನೀಡಿದ್ದ ವೇಳೆ ಆಕೆ ಎಷ್ಟು ಅಸೂಯೆ ಪಟ್ಟಿದ್ದಳೆಂದರೆ ಥೇಟ್ ಅಂತದ್ದೇ ಉಂಗುರುವನ್ನ ತಾನೂ ತರಿಸಿಕೊಂಡಿದ್ದಳು. ಇದೇ ರಿಂಗ್ನ್ನು ಆಕೆ ತನ್ನ ಎಂಗೇಜ್ಮೆಂಟ್ ರಿಂಗ್ ಆಗಿ ಮಾಡಿಕೊಂಡಳು. ಆಕೆಗೆ ಮದುವೆಯಾಗಿದ್ದು ನಾಲ್ಕು ಮಕ್ಕಳು ಕೂಡ ಇದ್ದಾರೆ. ಅಲ್ಲದೇ ಆಕೆ ನನಗಿಂತ 10 ವರ್ಷ ದೊಡ್ಡವಳು ಎಂದು ಹೇಳಿದ್ದಾಳೆ.
ನನಗೆ ಆಕೆ ತನ್ನ ಎಂಗೇಜ್ಮೆಂಟ್ ರಿಂಗ್ ಬದಲಾಯಿಸಿದ ದಿನವೇ ಇದೇನು ವಿಚಿತ್ರ ಎಂದೆನಿಸಿತ್ತು. ಇದೀಗ ನನ್ನ ಮದುವೆ ಸಮಯದಲ್ಲಿಯೂ ನಾನು ಯಾವ ರೀತಿಯ ಉಡುಪು ತೆಗೆದುಕೊಂಡಿದ್ದೇನೋ ಆಕೆ ಸಹ ಅಂತದ್ದೇ ಉಡುಪನ್ನ ಖರೀದಿ ಮಾಡಿದ್ದಾಳೆ. ಬಣ್ಣದಲ್ಲಿ ಮಾತ್ರ ಕೊಂಚ ವ್ಯತ್ಯಾಸವಿದೆ ಅನ್ನೋದು ಬಿಟ್ಟರೆ ವಧುವಾಗಿರುವ ನನ್ನ ಉಡುಪಿಗೂ ಆಕೆಯ ಉಡುಪಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ವಧು ವಿವರಿಸಿದ್ದಾಳೆ.
ಅಲ್ಲದೇ ಆಕೆ ಮದುವೆ ಡ್ರೆಸ್ ವಿಚಾರವಾಗಿ ತನ್ನ ಅತ್ತಿಗೆ ಬಳಿ ಮಾತಾಡಿದ್ರೆ ಆಕೆ ದೊಡ್ಡ ಗಲಾಟೆಯನ್ನೇ ಮಾಡಿದ್ದಳಂತೆ. ಈ ವಿಚಾರದ ಬಳಿಕ ಮನೆಯಲ್ಲಿ ಜಗಳವೇ ಆಗಿದೆ. ಆದರೆ ನೆಟ್ಟಿಗರು ಮಾತ್ರ ವಧುವಿಗೆ ಸಪೋರ್ಟ್ ಮಾಡಿದ್ದಾರೆ. ಹಾಗೂ ನಿಮ್ಮ ಅತ್ತಿಗೆ ಮಾಡಿದ್ದು ಸರಿ ಅಲ್ಲ ಎಂದು ಹೇಳಿದ್ದಾರೆ.