ನಮ್ಮ ನಿತ್ಯ ಜೀವನದ ಕೆಲಸಗಳನ್ನು ಸುಲಲಿತಗೊಳಿಸುವ ವಿವಿಧ ಟ್ರಿಕ್ ಗಳು ಸಾಮಾಜಿಕ ಜಾಲತಾಣದಲ್ಲಿ ಆಗಿಂದಾಗೆ ಪ್ರಕಟಗೊಳ್ಳುತ್ತಿರುತ್ತದೆ.
ನೆಟ್ಟಿಗರು ತಮಗೆ ಗೊತ್ತಿರುವ ಟ್ರಿಕ್ ಗಳನ್ನು ವಿಡಿಯೋ ಮಾಡಿ ಪೋಸ್ಟ್ ಮಾಡಿ ಜಗತ್ತಿಗೆ ತಿಳಿಸಲು ಪ್ರಯತ್ನಿಸುತ್ತಾರೆ. ಇದೀಗ ಮಹಿಳೆಯೊಬ್ಬರು ಕಲ್ಲಂಗಡಿಯನ್ನು ಸುಲಭವಾಗಿ ಕಟ್ ಮಾಡುವ ವಿಧಾನವನ್ನು ತಿಳಿಯಪಡಿಸಿದ್ದಾರೆ.
ಕತ್ತರಿಸಲ್ಪಟ್ಟ ಕಲ್ಲಂಗಡಿಯನ್ನು ಹೋಳುಗಳನ್ನಾಗಿ ಮಾಡಲು ಚಾಕುವಿನ ಅಗತ್ಯವಿಲ್ಲ, ಹಲ್ಲನ್ನು ಸ್ವಚ್ಛವಾಗಿಟ್ಟುಕೊಳ್ಳಲು ಬಳಸುವ ಡೆಂಟಲ್ ಫ್ಲೋಸ್ (ದಾರ) ಸಾಕಾಗುತ್ತದೆ ಎಂದು ಅವರು ತೋರಿಸಿದ್ದಾರೆ.
ಹಲ್ಲಿನ ಮಧ್ಯೆ ಸಿಲುಕುವ ಆಹಾರವನ್ನು ಸ್ವಚ್ಛಗೊಳಿಸಲು ಡೆಂಟಲ್ ಫ್ಲೋಸ್ ಬಳಸುವ ವಾಡಿಕೆಯಿದೆ. ಅದನ್ನು ಹಣ್ಣು ಕತ್ತರಿಸಲೂ ಬಳಸಬಹುದಾಗಿದೆ, ಕ್ಷಣ ಮಾತ್ರದಲ್ಲಿ ಕಲ್ಲಂಗಡಿ ಹಣ್ಣು ಕತ್ತರಿಸಬಹುದು ಎಂಬುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಧಾನಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ, ಕೆಲವರು ಗೇಲಿ ಮಾಡಿದ್ದಾರೆ.