ತಮ್ಮದೇ ಆದ ರೀತಿಯಲ್ಲಿ ರೆಸಿಪಿಗಳನ್ನು ಸಿದ್ಧಪಡಿಸಿ ಅದನ್ನು ನೆಟ್ಟಿಗರಿಗೆ ಮುಂದೆ ಇಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇಲ್ಲೊಬ್ಬಾಕೆ ಹಾಗೆ ತಯಾರಿಸಿದ ಪಾಸ್ತಾವನ್ನು ನೆಟ್ಟಿಗರು ನೋಡಿ ಅಸಹನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಿಸಾ ಎಂಬ ಯುವತಿ ತನ್ನ ಫೇಸ್ಬುಕ್ ಪುಟದಲ್ಲಿ ಈ ವಿಚಿತ್ರ ರೀತಿಯ ಪಾಸ್ತಾ ತಯಾರಿಕೆಯ ವಿಡಿಯೋ ಹಂಚಿಕೊಂಡಿದ್ದಾರೆ.
ಆಕೆ ಮಾಡುವ ಮೊದಲ ಕೆಲಸವೆಂದರೆ ಕಿಚನ್ ಕೌಂಟರ್ ನಲ್ಲಿ ಕೆಂಪು ಸಾಸ್ ಅನ್ನು ಸುರಿಯುತ್ತಾಳೆ. ಬಳಿಕ ನೂಡಲ್ಸ್ ಎಂದು ಕರೆದು ಚೀಸ್, ಸ್ಪಾಗೆಟ್ಟಿಯನ್ನು ಸೇರಿಸುತ್ತಾಳೆ ಮತ್ತು ಎಲ್ಲವನ್ನೂ ಬೆರೆಸುತ್ತಾಳೆ.
ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಬೆಳವಣಿಗೆ: ಇಂದು 2 –ಡಿಜಿ ಔಷಧ ಬಿಡುಗಡೆ
ಅಕೆ ಅದನ್ನು ಬೇಯಿಸಲು ಪ್ಯಾನ್ ಅಥವಾ ಸ್ಟೌಟಾಪ್ ಬಳಸುವುದಿಲ್ಲ. ಕೇವಲ ಕೌಂಟರ್ ಅವಳಿಗೆ ಸಾಕು ಎಂದು ತೋರುತ್ತದೆ. ಬಳಿಕ ಎಲ್ಲವನ್ನೂ ಮಿಕ್ಸ್ ಮಾಡಿ ಟೇಸ್ಟ್ ನೋಡುತ್ತಾಳೆ.
ಈ ವಿಲಕ್ಷಣವಾದ ಟ್ರಿಕ್ ಫೇಸ್ಬುಕ್ನಲ್ಲಿ 27 ಮಿಲಿಯನ್ ವೀಕ್ಷಣೆ ಪಡೆದಿದೆ. ಇದೊಂದು ರೀತಿ ಹಾಸ್ಯಾಸ್ಪದವಾಗಿರುವುದರಿಂದ ಸಾಕಷ್ಟು ವೈರಲ್ ಆಗಿದೆ. ಹಲವು ನೆಟ್ಟಿಗರು ಈ ಬಗ್ಗೆ ಅಭಿಪ್ರಾಯ ನೀಡಿದ್ದು, ಒಬ್ಬರಂತೂ ಇದು ಬಹುಮಾನ ಯೋಗ್ಯ ಭೋಜನ ಎಂದು ವ್ಯಂಗ್ಯವಾಡಿದ್ದಾರೆ.
https://www.youtube.com/watch?v=y85nJVLY4lU