ಮುಖದ ಮೇಲಿನ ಮೊಡವೆ, ಕಲೆ ತೆಗೆಯುವ ಸಲುವಾಗಿ ಅರಿಶಿನ ಹಚ್ಚಿದ ಯುವತಿಯ ವದನವೀಗ ಕಿತ್ತಳೆ ಬಣ್ಣಕ್ಕೆ ತಿರುಗಿದ ವೈಚಿತ್ರ್ಯ ವರದಿಯಾಗಿದೆ.
ಟಿಕ್ ಟಾಕ್ ಸುಂದರಿ ಲಾರೆನ್ ರಿನ್ನೇ ಎಂಬಾಕೆ ಮೊಡವೆ, ಕಲೆ ತೆಗೆಯಲು ಮನೆಮದ್ದುಗಳನ್ನು ಪ್ರಯೋಗಿಸಲು ಮುಂದಾದಳು. ಯೂಟ್ಯೂಬ್ ಸೇರಿದಂತೆ ಜಾಲತಾಣಗಳಲ್ಲಿ ನೋಡಿ, ಓದಿಕೊಂಡು ಅರಿಶಿನ ಫೇಸ್ ಪ್ಯಾಕ್ ಹಾಕಲು ಶುರು ಮಾಡಿದಳು.
23 ಪುರುಷರನ್ನು ಹಿಂದಿಕ್ಕಿ 24 ಗಂಟೆಗಳ ರೇಸ್ ಗೆದ್ದ ಮುಂಬೈ ಮಹಿಳೆ
ಮೊಡವೆ ಇರುವ ಜಾಗಕ್ಕಷ್ಟೇ ಮನೆ ಮದ್ದು ಮಾಡುವ ಬದಲು, ಇಡೀ ಮುಖಕ್ಕೆ ರಾಶಿ ರಾಶಿ ಅರಿಶಿನದ ಬಣ್ಣವನ್ನು ಹಚ್ಚಿ, ತಿಕ್ಕಿ ತೊಳೆಯುತ್ತಾ ಬಂದಿದ್ದಾಳೆ. ಕೊನೆಗೆ ಕೈ, ಮುಖ ಎಲ್ಲ ಕಿತ್ತಳೆ ಬಣ್ಣಕ್ಕೆ ತಿರುಗಿದೆ. ಕಿತ್ತಳೆ ಬಣ್ಣದ ಮುಖವು ಸಹಜ ಮೈಬಣ್ಣಕ್ಕೆ ಬರಲು ಮೂರು ವಾರಗಳು ಬೇಕಾಯಿತು.