ತನ್ನ ಬಾಯ್ ಫ್ರೆಂಡ್ ಬಗ್ಗೆ ಯುವತಿಯೊಬ್ಬಳು ಮಾಡಿದ ತುಂಟ ಕಾಮೆಂಟ್‌ನಿಂದ ಅಸೂಯೆಗೊಂಡ ಆತನ ಗೆಳತಿ, ಅಭಿಪ್ರಾಯವನ್ನು ಅಳಿಸುವಂತೆ ಪಟ್ಟುಹಿಡಿದ ಪ್ರಸಂಗವೊಂದು ನಡೆದಿದೆ.
ಅಂಟೋನಿಯಾ ಎಂಬಾಕೆ ವೇಯ್ಟರ್ ಕುರಿತು ನಾಟಿ ನಾಟಿಯಾಗಿ ಜಾಲತಾಣದಲ್ಲಿ ವಿಮರ್ಶೆ ಮಾಡಿದ್ದರು.
ಫ್ಲರ್ಟಿ ಕಾಮೆಂಟ್ ಪೋಸ್ಟ್ ಮಾಡಿದ ಇಪ್ಪತ್ತು ನಿಮಿಷಗಳ ನಂತರ ಆಂಟೋನಿಯಾ ವೇಯ್ಟರ್‌ನ ಗೆಳತಿಯಿಂದ ಅಚ್ಚರಿಯ ಮೆಸೇಜ್ ಸ್ವೀಕರಿಸಿದ್ದಾಳೆ. ನಿನ್ನದು ಸೂಕ್ತವಲ್ಲದ ವಿಮರ್ಶೆ, ಅದನ್ನು ಹಿಂಪಡೆಯಬೇಕೆಂದು ಬಯಸುತ್ತಾಳೆ.
ಆಸ್ಪತ್ರೆಗಳಿಗೆ 2 ಲಕ್ಷಕ್ಕಿಂತ ಹೆಚ್ಚು ಕ್ಯಾಶ್ ಪೇಮೆಂಟ್ ಮಾಡುವವರಿಗೊಂದು ಮಹತ್ವದ ಸುದ್ದಿ
ವಿಮರ್ಶೆಯಲ್ಲಿ, ಆಂಟೋನಿಯಾ “ವಾತಾವರಣವನ್ನು ಪ್ರೀತಿಸಿ. ಸಾಕಷ್ಟು ಒಳ್ಳೆಯ ಪಾನೀಯಗಳು, ಉತ್ತಮ ಆಹಾರ ಮೆನು. ಇರಾ? ನನ್ನ ಕಿಂಗ್. ನಿನ್ನನ್ನು ಪ್ರೀತಿಸುತ್ತೇನೆ…..” ಎಂದು ಬರೆದಿದ್ದಳು.
ಇದನ್ನು ಗಮನಿಸಿದ ವೇಯ್ಟರ್‌ನ ಗರ್ಲ್ ಫ್ರೆಂಡ್, “ಹಲೋ, ನನ್ನ ಬಾಯ್ ಫ್ರೆಂಡ್ ಇರಾ ಕುರಿತು ನಿನ್ನ ವಿಮರ್ಶೆ ನೋಡಿದೆ ಮತ್ತು ನೀವು ಅವನನ್ನು ನಿನ್ನ ಕಿಂಗ್ ಎಂದು ಕರೆಯುವುದನ್ನು ನಾನು ನಿಜವಾಗಿಯೂ ಇಷ್ಟಪಡಲ್ಲ. ಇದು ಸೂಕ್ತವಲ್ಲ ಎಂದು ನಾನು ಭಾವಿಸುವೆ ಮತ್ತು ಅವನ ಸೇವೆಗಳ ಬಗ್ಗೆ ಒಂದು ಕಾಮೆಂಟ್ ಸಾಕು” ಎಂದು ಜಲಸ್ ಹೊರಹಾಕಿದಳು.
ಆಂಟೋನಿಯಾ ಇರಾಳ ಗೆಳತಿಗೆ ಮರು ಉತ್ತರವಾಗಿ, ಚಿಂತೆ ಮಾಡಲು ಏನೂ ಇಲ್ಲ…..ಮತ್ತು ಈ ರಾತ್ರಿ ಯಾರು ಹೆಚ್ಚು ವಿಮರ್ಶೆ ಪಡೆಯಬಹುದೆಂದು ನೋಡಲು ಸ್ಪರ್ಧೆ ನಡೆಸುತ್ತಿದ್ದರು ಅಷ್ಟೆ ಎಂದು ಸಮಾಧಾನಪಡಿಸಿದಳು.