ಸಿಹಿ ತಿಂಡಿಗಳನ್ನ ಇಷ್ಟ ಪಡುವವರಿಗೆ ಐಸ್ ಕ್ರೀಂ ಸಾಮಾನ್ಯವಾಗಿ ಇಷ್ಟವಾಗುತ್ತೆ. ಐಸ್ಕ್ರೀಂಗಳನ್ನ ತಿನ್ನಬೇಕು ಅಂದರೆ ಅಬ್ಬಬ್ಬಾ ಅಂದ್ರೆ ನೀವು ಯಾವ್ಯಾವ ಸವಾಲುಗಳನ್ನ ಎದುರಿಸೋಕೆ ತಯಾರಿದ್ದೀರಿ..?
ಬ್ರಿಟನ್ನ ಯುವತಿಯೊಬ್ಬರು ತನ್ನಿಷ್ಟದ ಡೆಸರ್ಟ್ ಸೇವನೆ ಮಾಡಲಿಕ್ಕೋಸ್ಕರ ಬರೋಬ್ಬರಿ 200 ಕಿಲೋಮೀಟರ್ ಪ್ರಯಾಣಿಸಿದ್ದಾಳೆ.
ವಿಕ್ಕಿ ಗೀ ಎಂಬಾಕೆ ಕೇಂಬ್ರಿಡ್ಜ್ನಿಂದ ಯಾರ್ಕ್ಶೈರ್ವರೆಗೆ ಪ್ರಯಾಣಿಸಿ ತಮ್ಮಿಷ್ಟದ ಸ್ವೀಟ್ ಬಿಸ್ಕಾಫ್ ಪಡ್ಡಿಂಗ್ ಎಂಬ ಡೆಸರ್ಟ್ನ್ನು ಸೇವಿಸಿದ್ದಾರೆ.
ಈ ವಿಚಾರವನ್ನ ಟಿಕ್ಟಾಕ್ನಲ್ಲಿ ಶೇರ್ ಮಾಡಿರುವ ಡಾಲಿ ಡೆಸರ್ಟ್ ಸಿಬ್ಬಂದಿ, ಡೆಸರ್ಟ್ ಸೇವನೆ ಮಾಡಲಿಕ್ಕಾಗಿ ನೀವು ಅಬ್ಬಬ್ಬಾ ಎಂದರೆ ಎಷ್ಟು ದೂರ ಪ್ರಯಾಣಿಸಬಹುದು ..? ಎಂದು ಪ್ರಶ್ನೆ ಮಾಡಿದೆ.
ಈ ಗ್ರಾಹಕಿ ಡೆಸರ್ಟ್ ಸೇವನೆ ಮಾಡಬೇಕು ಅಂತಾ ಕೇಂಬ್ರಿಡ್ಜ್ನಿಂದ ಬಂದಿದ್ದಾಳೆ. ಇದು ನಮ್ಮ ಡೆಸರ್ಟ್ ಶಾಪ್ನಿಂದ ಮೂರುವರೆ ಗಂಟೆ ಪ್ರಯಾಣ ಮಾಡಬೇಕಾದ ಸ್ಥಳವಾಗಿದೆ. ಹೀಗಾಗಿ ನಾನು ಈಕೆಯ ಟಿಕ್ಟಾಕ್ ವಿಡಿಯೋ ಮಾಡಿದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳಲ್ಲಿಯೂ ವೈರಲ್ ಆಗಿದೆ.