ಅಪರೂಪದ ಜೆನೆಟಿಕ್ ಅಲರ್ಜಿ ಪೀಡಿತರಾದ ಮೊರಕ್ಕೋದ ಮಹಿಳೆಯೊಬ್ಬರು ತಮ್ಮ ಮುಖವನ್ನು ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಿಸಿಕೊಳ್ಳಲು ಸ್ಪೇಸ್ ಹೆಲ್ಮೆಟ್ ಧರಿಸಿಕೊಂಡು ಓಡಾಡಬೇಕಾಗಿದೆ.
28 ವರ್ಷ ವಯಸ್ಸಿನ ಫಾತಿಮಾ ಘಝೋಯ್, ಕ್ಸೆರೋಡರ್ಮಾ ಪಿಗ್ಮೆಂಟೋಸಮ್ ಹೆಸರಿನ ಅಪರೂಪದ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಕೆಗೆ ಎರಡು ವರ್ಷ ವಯಸ್ಸಿದ್ದಾಗಲೇ ಆಕೆಯ ಹೆತ್ತವರು ಇದನ್ನು ಗಮನಿಸಿದ್ದಾರೆ. ಈ ಸಮಸ್ಯೆ ಇರುವ ಜನರಿಗೆ ತಮ್ಮ ತ್ವಚೆ ಏನಾದರೂ ಸೂರ್ಯನ ಕಿರಣಗಳಿಗೆ ನೇರವಾಗಿ ಎಕ್ಸ್‌ಪೋಸ್ ಆದ ಕೂಡಲೇ ಚರ್ಮ ಸುಟ್ಟು ಹೋಗುತ್ತದೆ. ಇದಲ್ಲದೇ, ಶುಷ್ಕ ಹಾಗೂ ಮುಪ್ಪಾದ ಚರ್ಮವೂ ಸಹ ಕಾಣಿಸಿಕೊಳ್ಳಲು ಆರಂಭಿಸುತ್ತದೆ.
ಹೀಗಾಗಿ, ಕಳೆದ 20 ವರ್ಷಗಳಿಂದ ಒಂದೇ ಒಂದು ದಿನವೂ ಸಹ ಈಕೆ ಹಗಲು ಹೊತ್ತಿನಲ್ಲಿ ಗ್ಲೌವ್ಸ್ ಹಾಗೂ ಸ್ಪೇಸ್ ಹೆಲ್ಮೆಟ್ ಇಲ್ಲದೇ ಆಚೆ ಬಂದೇ ಇಲ್ಲವಂತೆ.