ನ್ಯೂಯಾರ್ಕ್: ಬೆಳಗ್ಗೆ ಎದ್ದು, ಕೆಲಸಕ್ಕೆ ಹೋಗುವವರಿಗೆ ಬಟ್ಟೆ ತೊಡುವುದೂ ಕಷ್ಟವೇ. ಪ್ಯಾಂಟ್ ಹಾಕು, ಟಾಪ್ ಹಾಕು ಎಂದು ಎಷ್ಟೆಲ್ಲ ಕಷ್ಟ ಎಂದು ಗೊಣಗುವುದಿದೆ. ಆದರೆ, ಅದಕ್ಕೆಲ್ಲ ಇಲ್ಲಿದೆ ಪರಿಹಾರ. ಅಮೆರಿಕಾ ಮಹಿಳೆ ಹೇಳುವ ಪ್ರಕಾರ ಒಂದೇ ಕಾಲಿನಿಂದ ಸುಲಭವಾಗಿ ತೊಡಬಲ್ಲ ಬಟ್ಟೆಯನ್ನು ಆಕೆ ಬಳಸುತ್ತಿದ್ದಾಳಂತೆ.
ಒಂದೇ ಕಾಲಿನಿಂದ ತೊಡಬಹುದಾದ ಜಂಪ್ ಸೂಟ್ ಒಂದನ್ನು ಅಮೆರಿಕಾದ ಮಹಿಳೆ ತಯಾರಿಸಿದ್ದು, ಅದನ್ನು ತೊಟ್ಟ ಫೋಟೋ ವೈರಲ್ ಆಗಿದೆ.
ಅಮೆರಿಕಾದ ಮಹಿಳೆ 2017 ರ ಕ್ರಿಸ್ ಮಸ್ ಈವ್ ಸಂದರ್ಭದ ಫೋಟೋ ಹಾಕಿದ್ದರು, ನಾಲ್ಕು ವರ್ಷಗಳಿಂದ ಇದೇ ಬಟ್ಟೆ ತೊಡುತ್ತಿರುವುದಾಗಿ ಆಕೆಯ ಸ್ನೇಹಿತೆಗೆ ತಿಳಿಸಿದ್ದಾರೆ. ಸಂಭಾಷಣೆ ವೈರಲ್ ಆಗಿದೆ.