ಮನೆ ಮುಂದೆ, ಟೆರಸ್ ಮೇಲೆ ಹೂ, ತರಕಾರಿ ಗಿಡವನ್ನು ಬೆಳೆಸುವ ಅಭ್ಯಾಸ ಅನೇಕರಿಗಿರುತ್ತದೆ. ಮಾರುಕಟ್ಟೆಯಿಂದ ಗಿಡವನ್ನು ತಂದು ಬೆಳೆಸುತ್ತಾರೆ. ಹಾಗೆ ತಂದು ಪ್ರೀತಿಯಿಂದ ಸಾಕಿದ್ದ ಗಿಡದ ಸತ್ಯ ತಿಳಿದ ಮಹಿಳೆಯೊಬ್ಬರು ಕಂಗಾಲಾಗಿದ್ದಾರೆ.
ಆಕೆ ಮಾರುಕಟ್ಟೆಯಿಂದ ತಂದ ಗಿಡವನ್ನು ಅಡುಗೆ ಮನೆ ಕಿಟಕಿಯಲ್ಲಿಟ್ಟಿದ್ದಳಂತೆ. ಅದಕ್ಕೆ ಎರಡು ವರ್ಷಗಳಿಂದ ನೀರು ಹಾಕಿದ್ದಳಂತೆ. ಮಕ್ಕಳಂತೆ ಅದನ್ನು ಪ್ರೀತಿಸುತ್ತಿದ್ದಳಂತೆ. ಆದ್ರೆ ಒಂದು ದಿನ ಬೇರೆ ಕುಂಡ ತಂದು ಗಿಡ ಬದಲಾಯಿಸಲು ಮುಂದಾಗಿದ್ದಾಳೆ. ಆಗ ಸತ್ಯ ಗೊತ್ತಾಗಿದೆ.
ಸತತ ಎರಡು ವರ್ಷಗಳಿಂದ ನೀರು ಹಾಕಿ ಬೆಳೆಸಿದ್ದ ಗಿಡ ನಕಲಿ ಎಂಬುದು ಗೊತ್ತಾಗಿದೆ. ಇದು ಪ್ಲಾಸ್ಟಿಕ್ ಗಿಡ ಎಂಬುದನ್ನು ತಿಳಿದ ಮಹಿಳೆ ದುಃಖಗೊಂಡಿದ್ದಾಳೆ. ಇದನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾಳೆ.
https://www.facebook.com/caelie.chapman.5/posts/190559855547244