ರಾಜಕೀಯ ಸ್ಲೋಗನ್ಗಳಿರುವ ಟೀ ಶರ್ಟ್ ಹಾಕಿಕೊಂಡು ಮತದಾನ ಮಾಡಲು ಬರುವಂತಿಲ್ಲ ಎಂದು ಅಧಿಕಾರಿ ಹೇಳಿದ್ದಕ್ಕೆ, ಮಹಿಳೆಯೊಬ್ಬಳು ಟೀ ಶರ್ಟ್ ತೆಗೆದು ಟಾಪ್ಲೆಸ್ ಆಗಿಯೇ ಮತದಾನ ಮಾಡಿರುವ ಘಟನೆ ನಡೆದಿದೆ.
ಹೌದು ನ್ಯೂ ಹ್ಯಾಂಶೈರ್ನಲ್ಲಿ ಇತ್ತೀಚಿಗಷ್ಟೇ ನಡೆದ ಚುನಾವಣಾ ಮತದಾನದ ವೇಳೆ, ಮಹಿಳೆಯೊಬ್ಬಳು “ಮ್ಯಾಕ್ಕೇನ್ ಹಿರೋ, ಟ್ರಂಪ್ ಝೀರೋʼ ಎನ್ನುವ ರಾಜಕೀಯ ಹೇಳಿಕೆಯಿರುವ ಟೀ ಶರ್ಟ್ ಧರಿಸಿ ಬಂದಿದ್ದರು. ಆದರೆ ಸ್ಥಳದಲ್ಲಿದ್ದ ಅಧಿಕಾರಿ ಪೌಲ್ ಅವರು ಈ ರೀತಿ ಮತಗಟ್ಟೆಯನ್ನು ಪ್ರವೇಶ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಆದರೆ ನಡೆಯುತ್ತಿದ್ದ ಚುನಾವಣೆಯಲ್ಲಿ ಟ್ರಂಪ್ ಆಗಲಿ ಮ್ಯಾಕ್ಕೇನ್ ಅವರ ಹೆಸರಾಗಲಿ ಬ್ಯಾಲೆಟ್ ಪೇಪರ್ನಲ್ಲಿ ಇರಲಿಲ್ಲವೆಂದು ಮಹಿಳಾ ವಾದ ಮಾಡಿದ್ದಾಳೆ.
ಆದರೆ ಇದಕ್ಕೆ ಅವಕಾಶ ನೀಡದಿದ್ದಾಗ ಮಹಿಳೆ ತನ್ನ ಟೀ ಶರ್ಟ್ ತೆಗೆದು ಮತಗಟ್ಟೆ ಪ್ರವೇಶಿಸಿದ್ದಾಳೆ. ಆಕೆ ಟೀ ಶರ್ಟ್ ತೆಗೆಯುವ ಮೊದಲು ಈ ರೀತಿ ಮಾಡದಂತೆ ನಾವು ಹೇಳುವ ಮೊದಲೇ ಆಕೆ ತೆಗೆದು ಟಾಪ್ಲೆಸ್ ಆಗಿದ್ದಳು ಎಂದಿದ್ದಾರೆ ಅಧಿಕಾರಿಗಳು. ಅಧಿಕಾರಿಯ ಪ್ರಕಾರ, ಸುತ್ತಮುತ್ತ 15 ಜನರಿದ್ದರು. ಬಳಿಕ ಆಕೆಯನ್ನು ಮತಗಟ್ಟೆ ಪ್ರದೇಶದಿಂದ ಹೊರಕಳುಹಿಸಿದ್ದಾರೆ. ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ತಿಳಿದುಬಂದಿದೆ.