ಲಾಕ್ ಡೌನ್ ಸಂದರ್ಭದಲ್ಲಿ ಜನರು ಅವರವರ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದರು. ಕೆಲವರು ತಮ್ಮ ಪ್ರತಿಭೆಯನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಆದರೆ, ವಿದೇಶಿ ಮಹಿಳೆಯೊಬ್ಬರು ಕ್ರಿಯಾತ್ಮಕವಾಗಿ 2020ರಲ್ಲಿ ಸಾಧನೆ ಮಾಡಿದ್ದಾರೆ…! ಅದೇನೆಂಬುದನ್ನು ನೋಡೋಣ ಬನ್ನಿ…
2020ರ ಹವಾಮಾನದ ಏರಿಳಿತಗಳನ್ನು ಉಲ್ಲನ್ ನೂಲಿನಲ್ಲಿ ದಾಖಲಿಸುವ ಅತ್ಯಂತ ಕ್ಲಿಷ್ಟಕರ ಕೆಲಸವನ್ನು ಸರಳವಾಗಿ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಜೋಸಿ ಜಾರ್ಜ್ ಎಂಬ ಮಹಿಳೆ ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಾವು ಮಾಡಿದ ಸಾಧನೆಯನ್ನು ಫೋಟೋ ಸಹಿತ ವಿವರಿಸಿಕೊಂಡಿದ್ದಾರೆ.
ಇದಕ್ಕಾಗಿ ಅವರು 1 ಕೆಜಿ ಉಲ್ಲನ್ ನೂಲನ್ನು ಬಳಸಿಕೊಂಡು ಪ್ರತಿ ದಿನದ ಹವಾಮಾನವನ್ನು ನೋಡಿಕೊಂಡು ಅದರ ಮಾಪನವನ್ನು ನೇಯ್ಗೆಯ ಮೂಲಕ ದಾಖಲಿಸಿದ್ದಾರೆ. ಹೀಗೆ ಒಂದು ಭರ್ತಿ ವರ್ಷದ ಹವಾಮಾನದ ದಾಖಲಾತಿಯನ್ನು ಮಾಡಲು 1 ಕೆಜಿ ಉಲ್ಲನ್ ಬಳಸಿ 70368 ಹೊಲಿಗೆ ಹಾಕಿದ್ದಾರೆ. ಅಲ್ಲದೆ, ಒಂದು ದಿನಕ್ಕೆ 2 ಸಾಲಿನಂತೆ 732 ಸಾಲಿನಿಂದ ಮೂರು ಮೀಟರ್ ಉದ್ದದ ಸ್ಕ್ರಾಪ್ ಅನ್ನು ತಯಾರು ಮಾಡಿದ್ದಾರೆ. ಇದಕ್ಕೆ ನೆಟ್ಟಗರಿಂದ ಅತ್ಯುತ್ತಮ ಪ್ರಶಂಸೆಗಳು ವ್ಯಕ್ತವಾಗಿವೆ.