ಲಾಕ್‌ಡೌನ್‌ನಿಂದ ಪ್ರಯಾಣದ ಮೇಲೆ ಹೇರಲಾಗಿದ್ದ ನಿರ್ಬಂಧ ತೆರವುಗೊಳಿಸಿದ ಬಳಿಕ ಜನರು ಈಗ ಎಲ್ಲೆಲ್ಲೂ ಅಡ್ಡಾಡಲು ಆರಂಭಿಸಿದ್ದಾರೆ. ಮೃಗಾಲಯ ಹಾಗೂ ಜೈವಿಕಧಾಮಗಳಿಗೆ ಭೇಟಿ ಕೊಡಲು ಅವಕಾಶ ನೀಡಲಾಗಿದ್ದು, ವೀಕ್ಷಕರು ಹೆಚ್ಚಿನ ಸಂಖ್ಯೆಗಳಲ್ಲಿ ಭೇಟಿ ನೀಡುತ್ತಿದ್ದಾರೆ.
ನೀರಾನೆಯೊಂದರ ಬಾಯಿಗೆ ಪ್ಲಾಸ್ಟಿಕ್ ಬಾಟಲಿ ಎಸೆಯುತ್ತಿರುವ ಯುವತಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಪಶ್ಚಿಮ ಜಾವಾದ ಬೊಗೋರ್‌ನಲ್ಲಿರುವ ತಮನ್ ಸಫಾರಿಯಲ್ಲಿ ಈ ಘಟನೆ ಜರುಗಿದ್ದು, ಸಿಂಟಿಯಾ ಆಯು ಎಂಬವರು ಇದರ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಸಾವಿರಾರು ಮಂದಿಗೆ ದಿನನಿತ್ಯ ಕೋವಿಡ್ ಲಸಿಕೆ ಹಾಕುತ್ತಿದ್ದಾರೆ ಈ ’ಸೂಪರ್‌ಮ್ಯಾನ್’
“ಕಾರೊಂದರ ಕಿಟಕಿಯಿಂದ ಹೊರಗೆ ಕೈಯೊಂದು ಹೊರಬಂದು ಪ್ಲಾಸ್ಟಿಕ್ ಕಪ್ ಅನ್ನು ನೀರಾನೆಯತ್ತ ತೋರಿ, ಅದರ ಬಾಯಿ ತೆರೆಯುವಂತೆ ಮಾಡಿ, ಕಸದ ಬುಟ್ಟಿಯೇನೋ ಎಂಬಂತೆ ಕಪ್ ಅನ್ನು ಅದರ ಬಾಯಿಗೆ ಹಾಕಿದ್ದನ್ನು ಕಂಡೆ. ಈ ಅನಿಷ್ಟಕ್ಕೆ ತಡೆಯೊಡ್ಡಲು ಹಾರ್ನ್ ಮಾಡಿದರೂ ಸಹ ಪಾಪಿಗಳು ನನ್ನ ಕರೆಗೆ ಓಗೊಡಲಿಲ್ಲ” ಎಂದಿದ್ದಾರೆ ಆಯು.
ಅದೇ ಜಾಗದಲ್ಲಿರುವ ಟೈಗರ್ ಸ್ಪಾಟ್ ತಲುಪಿದ ಆಯು, ಅಲ್ಲಿದ್ದ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು ಕೂಡಲೇ ನೀರಾನೆಯ ಬಾಯಿಂದ ಪ್ಲಾಸ್ಟಿಕ್ ಕಪ್ ಹೊರತೆಗೆಯಲಾಗಿದೆ.
https://www.youtube.com/watch?v=52ou4Lda_8U&t=1s