
ಬಹಳ ಶಾಕಿಂಗ್ ಘಟನೆಯೊಂದರಲ್ಲಿ, ಮೆಲ್ಬರ್ನ್-ಆಕ್ಲೆಂಡ್ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ ಹನ್ನಾ ಲೀ ಪಿಯರ್ಸನ್ ಹೆಸರಿನ ಮಾಡೆಲ್ ಒಬ್ಬರು ವಿಮಾನವನ್ನೇ ಹೊತ್ತಿ ಉರಿಸುವುದಾಗಿ ಬೆದರಿಕೆಯೊಡಿದ್ದಾರೆ.
ಪ್ರಯಾಣದ ವೇಳೆ ತನಗೆ ಒಂದು ಗ್ಲಾಸ್ ವೈನ್ ಸಿಗಲಿಲ್ಲ ಎಂಬ ಹತಾಶೆಯಲ್ಲಿ ಮಾಡೆಲ್ ಹೀಗೆಲ್ಲಾ ಮಾತನಾಡಿದ್ದಾಳೆ. ಈ ಘಟನೆಯು ಕಳೆದ ವರ್ಷದ ನವೆಂಬರ್ 7ರಂದು ಘಟಿಸಿತ್ತು.
ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿ ʼಪಟ್ಟʼ ಕಳೆದುಕೊಂಡ ಮಾಡೆಲ್..!
ನ್ಯೂಜಿಲೆಂಡ್ ಹೆರಾಲ್ಡ್‌ನ ವರದಿ ಪ್ರಕಾರ, ಘಟನೆ ಸಂಬಂಧ ಕ್ರೈಸ್ಟ್‌ಚರ್ಚ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಮಾಡೆಲ್ ಅನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸದ್ಯ ಬೇಲ್ ಮೇಲೆ ಹೊರಗಿರುವ ಈಕೆಗೆ ಶಿಕ್ಷೆಯ ಪ್ರಮಾಣ ಎಷ್ಟೆಂದು ಜೂನ್ 23ರಂದು ನಿರ್ಧಾರವಾಗಲಿದೆ. ವಿಮಾನದಲ್ಲಿ ತನ್ನ ಕೆಟ್ಟ ವರ್ತನೆಯಿಂದ ಸಿಬ್ಬಂದಿಗೆ ತೊಂದರೆ ಮಾಡಿದ್ದನ್ನು ಮಾಡೆಲ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ.
ಫ್ಲೈಟ್‌ನಲ್ಲಿದ್ದ ವೇಳೆ ವೈನ್ ಕೇಳಿದ ಪಿಯರ್ಸನ್‌ಗೆ, ಟಿಕೆಟ್ ದರದಲ್ಲಿ ವೈನ್‌ನ ಖರ್ಚು ಸೇರಿಸಿಲ್ಲವೆಂದ ಸಿಬ್ಬಂದಿ, ಬೇಕಾದರೆ ಮೆನುವಿನಲ್ಲಿರುವ ಬೆಲೆ ತೆತ್ತು ಖರೀದಿ ಮಾಡಬಹುದೆಂದು ತಿಳಿಸಿದ್ದಾರೆ. ಆ ವೇಳೆ ಕುಪಿತಗೊಂಡ ಪಿಯರ್ಸನ್ ಈ ಸೀನ್ ಸೃಷ್ಟಿ ಮಾಡಿದ್ದಾರೆ. ಆ ವೇಳೆ ವಿಮಾನದಲ್ಲಿ 72 ಮಂದಿ ಪ್ರಯಾಣಿಕರು ಇದ್ದರು. ಅತಿರೇಕದ ವರ್ತನೆ ತೋರಿದ ಪಿಯರ್ಸನ್ ಳನ್ನು ವಿಮಾನದ ಸಿಬ್ಬಂದಿ ಸೀಟ್‌ಬೆಲ್ಟ್ ಬಳಸಿ ಕಟ್ಟಿಹಾಕಿದ್ದರು.
ಈಕೆಗೆ ಕುಡಿತದ ಚಟವಿದ್ದು, ಇದೇ ಕಾರಣದಿಂದ ಹಿಂದೆಯೂ ಸಹ ಹೀಗೆ ಎಡವಟ್ಟು ಮಾಡಿಕೊಂಡಿದ್ದಾಳೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.