ಕ್ಷಯರೋಗ ಅನ್ನೋದು ಶ್ವಾಸಕೋಶಕ್ಕೆ ಬರುವ ಕಾಯಿಲೆಗಳಲ್ಲೊಂದಾಗಿದ್ದು ಕಾಲ ಕ್ರಮೇಣ ಮೆದುಳು ಹಾಗೂ ಮೂಳೆಗಳಲ್ಲೂ ಕಾಣಿಸಿಕೊಳ್ಳಬಹುದು. ಸೂಕ್ತ ಚಿಕಿತ್ಸೆಯ ಮೂಲಕ ಅನೇಕರು ಈ ಕಾಯಿಲೆಯಿಂದ ಪಾರಾಗಿದ್ರೆ ಇನ್ನು ಕೆಲ ಮಂದಿ ಇದೇ ಮಾರಕ ಕಾಯಿಲೆಗೆ ಬಲಿಪಶು ಆಗಿದ್ದಾರೆ.
ಕಳೆದ ಆರು ತಿಂಗಳಿನಿಂದ ಕಫ, ಜ್ವರ ಸೇರಿದಂತೆ ವಿವಿಧ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ತನಗೆ ಕ್ಷಯ ರೋಗ ಬಂದಿದೆ ಎಂದೇ ಭಾವಿಸಿದ್ದಳು. ಆದರೆ ಸೂಕ್ತ ಪರೀಕ್ಷೆಯ ಬಳಿಕ ವೈದ್ಯರು ಆಕೆಗೆ ಕ್ಷಯ ರೋಗ ಬಂದಿಲ್ಲ ಬದಲಾಗಿ ಶ್ವಾಸಕೋಶದಲ್ಲಿ ಕಾಂಡೋಮ್ ಸಿಲುಕಿರೋದ್ರ ಪರಿಣಾಮ ಈ ಎಲ್ಲಾ ಸಮಸ್ಯೆ ಉಂಟಾಗಿದೆ ಎಂದು ಶಾಕಿಂಗ್ ಸತ್ಯ ಹೇಳಿದ್ದಾರೆ.
27 ವರ್ಷದ ಶಾಲಾ ಶಿಕ್ಷಕಿಯಾಗಿದ್ದ ಮಹಿಳೆ ಸೆಕ್ಸ್ ಮಾಡುತ್ತಿದ್ದ ವೇಳೆ ತನಗೆ ಅರಿವಿಲ್ಲದಂತೆಯೇ ಕಾಂಡೋಮ್ನ್ನ ನುಂಗಿದ್ದಳು. ಇದು ಶ್ವಾಸಕೋಶದಲ್ಲಿ ಸಿಕ್ಕಿದ್ದರಿಂದ ಈ ಎಲ್ಲಾ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ ಇದರ ಬಗ್ಗೆ ಗೊತ್ತಿಲ್ಲದ ಮಹಿಳೆ ಕ್ಷಯ ರೋಗದ ಮಾತ್ರೆಗಳನ್ನ ಸೇವಿಸಿದ್ದಾಳೆ. ಆದರೆ ಯಾವುದರಿಂದಲೂ ಸಮಸ್ಯೆ ಬಗೆಹರಿಯದ ಕಾರಣ ಮಹಿಳೆ ಆಸ್ಪತ್ರೆಗೆ ಭೇಟಿ ನೀಡಿದ್ದಳು.
ಆಸ್ಪತ್ರೆಯಲ್ಲಿ ಈಕೆಗೆ ಕ್ಷಯರೋಗ ಇಲ್ಲ ಅನ್ನೋದು ಕನ್ಫರ್ಮ್ ಆಗಿದೆ. ಆದರೆ ಸ್ಕ್ಯಾನಿಂಗ್ ವೇಳೆ ಶ್ವಾಸಕೋಶದಲ್ಲಿ ಬೇರೆ ವಸ್ತು ಇರೋದು ಪತ್ತೆಯಾಗಿದೆ. ಇದನ್ನ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದಿದ್ದಾರೆ. ಈ ವೇಳೆ ಈಕೆ ಕಾಂಡೋಮ್ ನುಂಗಿರುವ ವಿಚಾರ ಬೆಳಕಿಗೆ ಬಂದಿದೆ. ಅಂದ ಹಾಗೇ ಇದು ವಿದೇಶದಲ್ಲಿ ನಡೆದಿರುವ ಘಟನೆಯಾಗಿದ್ದು, ʼNational Library of Medicineʼ ಪುಸ್ತಕದಲ್ಲಿ ಪ್ರಕಟವಾಗಿದೆ.