ಬಹುಕಾಲದಿಂದ ಕಾಡುತ್ತಿರುವ ಹಲ್ಲು ನೋವೇನಾದರೂ ನಿಮಗಿದ್ದರೆ, ಈ ಸುದ್ದಿ ಓದಿದ ಮರುಕ್ಷಣವೇ ದಂತ ವೈದ್ಯರನ್ನು ಸಂಪರ್ಕಿಸುವಂತೆ ಮಾಡುತ್ತದೆ.
ಇಂಗ್ಲೆಂಡಿನ ರೆಬಿಕಾ ಡಲ್ಟನ್ ಇದೇ ಕಾರಣಕ್ಕಾಗಿ 5 ತಿಂಗಳು ಆಸ್ಪತ್ರೆ ಸೇರುವಂತಾಗಿತ್ತಲ್ಲದೆ, 2 ಬಾರಿ ಸಾವಿನ ಬಾಗಿಲು ಬಡಿದು ಬಚಾವ್ ಆಗಿ ಬಂದಿದ್ದಾರೆ. 30 ಕೆಜಿಯಷ್ಟು ತೂಕ ಕಳೆದುಕೊಂಡಿದ್ದಾರೆ.
ಹೌದು, ಒಂದು ಹಲ್ಲುನೋವನ್ನು ಕೂಡ ನಿರ್ಲಕ್ಷಿಸುವಂತಿಲ್ಲ. 2019 ರಲ್ಲಿ ತೀವ್ರ ಹಲ್ಲು ನೋವಿಗೆ ಒಳಗಾದ ರೆಬಿಕಾ, ಡಿಸೆಂಬರ್ ವೇಳೆಗೆ ಚಿಕಿತ್ಸೆ ಪಡೆದು ಮರಳಿದ್ದರು. ಎಲ್ಲವೂ ಸರಿಯಿದೆ ಎಂದೇ ಭಾವಿಸಿದ್ದರು. ಆದರೆ, 2020 ರ ಮಾರ್ಚ್ ನಂತರ ನೆನಪಿನ ಶಕ್ತಿ, ನಡೆದಾಡುವ ಶಕ್ತಿ ಕಳೆದುಕೊಂಡರು.
ಪರೀಕ್ಷೆಗೊಳಪಡಿಸಿದ ವೈದ್ಯರು ಆಕೆಯ ಮೆದುಳು, ಹೃದಯ ಮತ್ತು ಯಕೃತ್ತಿಗೆ ಸೂಕ್ಷ್ಮಾಣು ಜೀವಿ ಬ್ಯಾಕ್ಟೀರಿಯಾ ದಾಳಿ ಮಾಡಿದ್ದು, ಬದುಕಿಸುವುದು ಕಷ್ಟವೆಂದು ನರರೋಗ ತಜ್ಞರ ಬಳಿ ಕಳುಹಿಸಲಾಯಿತು. ಮೆದುಳು, ಹೃದಯ, ಯಕೃತ್ತಿನಲ್ಲಿ ಸಮಸ್ಯೆ ಇದೆ, ಆಸ್ಪತ್ರೆಗಳಲ್ಲೆಲ್ಲ ಕೊರೋನಾ ಸೋಂಕು ಇದೆ. ಮಗಳು ಇನ್ನು ಬದುಕುವುದಿಲ್ಲ ಎಂದೇ ತಾಯಿ ನಿಶ್ಚಯಿಸಿದ್ದರು. ಅದೃಷ್ಟವಶಾತ್ ಕೊರೋನಾ ಪರೀಕ್ಷೆ ನೆಗೆಟಿವ್ ಬಂದಿದ್ದು, ಸತತ ಚಿಕಿತ್ಸೆ ನಂತರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.