ತನ್ನ ಮನೆಯಲ್ಲಿದ್ದ ನಾಝೀ ಧ್ವಾಜವನ್ನು ತೆಗೆದು ಹಾಕಲು ಬಂದ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ವಾಯುಪಡೆ ಅಧಿಕಾರಿಯೊಬ್ಬರು ಕೋರ್ಟ್ ಮೆಟ್ಟಿಲೇರಬೇಕಾಗಿ ಬಂದಿದೆ.
ವಾಯುಪಡೆ ಅಧಿಕಾರಿ ಅಲೆಕ್ಸಾಂಡರ್ ಫೀಸ್ಟರ್ ಅವರು ತಮ್ಮ ಮನೆ ಅಂಗಳದಲ್ಲಿದ್ದ ನಾಝಿ ಧ್ವಜ ಕಿತ್ತು ಹಾಕಲು ಮುಂದಾದ ತನ್ನ ಮೇಲೆ ಗುಂಡು ಹಾರಿಸಲು ಮುಂದಾಗಿದ್ದರು ಎಂದು ಆಪಾದಿಸಿ ಓಕ್ಲಾಹಾಮಾದ ಕೆಂಡಾಲ್ ಮೆಕ್‌ವೇ ಹೆಸರಿನ ಮಹಿಳೆ ಪ್ರಕರಣ ದಾಖಲಿಸಿದ್ದಾರೆ.
ಜೀವಂತವಾಗಿಯೇ ಇದ್ದ ವೈದ್ಯರು ಮೃತಪಟ್ಟಿದ್ದಾನೆಂದು ಘೋಷಿಸಿದ ವ್ಯಕ್ತಿ
ಅಲೆಕ್ಸಾಂಡರ್ ಮಾಡಿದ ಕೆಲಸದಿಂದ ದೊಡ್ಡ ಮೊತ್ತದ ವೈದ್ಯಕೀಯ ವೆಚ್ಚ ಭರಿಸಬೇಕಾಗಿ ಬಂದಿದ ಎಂದಿರುವ ದೂರುದಾರ ಮಹಿಳೆ, ತನಗೆ ಪರಿಹಾರ ರೂಪದಲ್ಲಿ 75,000 ಡಾಲರ್‌ಗಳನ್ನು ಕೊಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಘಟನೆಯಿಂದ ತಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಗಾಯವಾಗಿರುವುದಾಗಿ ಹೇಳಿರುವ ಮೆಕ್‌ವೇ, ನಿವೃತ್ತ ಅಧಿಕಾರಿಯ ಹುಚ್ಚಾಟದಿಂದ ತನ್ನ ಪ್ರಾಣಕ್ಕೇ ಕುತ್ತು ಬರುವ ಸಾಧ್ಯತೆಯೂ ಇತ್ತು ಎಂದಿದ್ದಾರೆ.
ಪ್ರಕರಣದ ಸಂಬಂಧ ಮಾ. 5ರಂದು ಆಲಿಕೆ ಇರಲಿದ್ದು, ಅಲೆಕ್ಸಾಂಡರ್‌ರನ್ನು $75,000 ಮೊತ್ತದ ಮೇಲೆ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಮಾರಣಾಂತಿಕ ಅಸ್ತ್ರ ಬಳಸಿ ಒಬ್ಬರನ್ನು ಕೊಲ್ಲುವ ಉದ್ದೇಶದಿಂದ ಶೂಟಿಂಗ್ ಮಾಡಿದ ಆರೋಪ ಅಲೆಕ್ಸಾಂಡರ್ ಮೇಲಿದೆ.