1995ರಲ್ಲಿ ಮ್ಯಾಕ್ಡೊನಾಲ್ಡ್ಸ್ನಲ್ಲಿ ಖರೀದಿ ಮಾಡಿದ ಕ್ಯಾರ್ಟರ್ ಪೌಂಡರ್ ಬರ್ಗರ್ ಒಂದು ಅನೇಕ ವರ್ಷಗಳ ಬಳಿಕವೂ ಕೊಳೆಯದೇ ಹಾಗೇ ಇತ್ತೆಂದು ಆಸ್ಟ್ರೇಲಿಯಾದ ಸ್ನೇಹಿತರಿಬ್ಬರು ಹೇಳಿದ್ದು ಕಳೆದ ವರ್ಷ ಸುದ್ದಿ ಮಾಡಿತ್ತು.
ಇದೀಗ ಮ್ಯಾಕ್ಡೊನಾಲ್ಡ್ಸ್ ಮೀಲ್ನ ದೀರ್ಘಾಯುಷ್ಯದ ಮತ್ತೊಂದು ನಿದರ್ಶನ ಸುದ್ದಿಯಲ್ಲಿದೆ.
ಬಾಕ್ಸ್ ಒಂದರಲ್ಲಿ ಮ್ಯಾಕ್ಡೊನಾಲ್ಡ್ಸ್ ಮೀಲ್ ಅನ್ನು ಬಚ್ಚಿಟ್ಟಿದ್ದ ಮಹಿಳೆಯೊಬ್ಬರು ಅದನ್ನು 24 ವರ್ಷಗಳ ಬಳಿಕೆ ತೆಗೆದು ನೋಡಿದಾಗ ಅದಿನ್ನೂ ಫ್ರೆಶ್ ಆಗಿರುವುದನ್ನು ಕಂಡು ದಂಗಾಗಿದ್ದಾರೆ. 1996ರಿಂದ ಈ ಮೀಲ್ ಬಾಕ್ಸನ್ನು ಹಾಗೇ ಇಡಲಾಗಿತ್ತು.
ಕಳೆದ ಮಾರ್ಚ್ನಲ್ಲಿ, ಬ್ರಿಟನ್ನ ವ್ಯಕ್ತಿಯೊಬ್ಬರು ಬಿಗ್ ಮ್ಯಾಕ್ ಮೀಲ್ ಅನ್ನು ತನ್ನ ಸ್ನೇಹಿತನ ಮನೆಯ ಉದ್ಯಾನದಲ್ಲಿ ಗುಂಡಿ ತೋಡಿ ಬಚ್ಚಿಟ್ಟಿದ್ದರು. ಮ್ಯಾಟ್ ನಾಡಿನ್ ಹೆಸರಿನ ಈತ ಬರ್ಗರ್ ಬಚ್ಚಿಟ್ಟ 14 ತಿಂಗಳ ಬಳಿಕ ತನ್ನ ಹುಟ್ಟುಹಬ್ಬದ ದಿನದಂದು ಅದನ್ನು ಹೊರತೆಗೆದು ತಿಂದಿದ್ದಾರೆ.
https://www.youtube.com/watch?time_continue=2&v=4ElFlDZwxS8&feature=emb_logo