ಮರದ ಪೆಟ್ಟಿಗೆಯೊಂದರಲ್ಲಿ ಪತಿಯ ಮೂಳೆಗಳನ್ನು ಹೊತ್ತೊಯ್ಯುತ್ತಿದ್ದ ಮಹಿಳೆಯನ್ನು ಜರ್ಮನಿ ಪೊಲೀಸರು ಮುನಿಚ್ ವಿಮಾನ ನಿಲ್ದಾಣದಲ್ಲಿ ತಡೆದು ನಿಲ್ಲಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದ ಕಸ್ಟಮ್ಸ್ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮರದ ಪೆಟ್ಟಿಗೆ ನೋಡಿ ಅನುಮಾನ ಶುರುವಾಗಿತ್ತು.
ಸುಮಾರು 74 ವರ್ಷದ ಅಜ್ಜಿ ಈ ಪೆಟ್ಟಿಗೆ ಒಯ್ಯುತ್ತಿದ್ದರು. ಇದನ್ನು ಪರಿಶೀಲಿಸಿದಾಗ ಅದರೊಳಗೆ ತನ್ನ ಪತಿಯ ಮೂಳೆಗಳಿದ್ದವು. ಗಾಬರಿಗೊಂಡ ಪೊಲೀಸರು, ವೃದ್ದೇ ಹಾಗೂ ಆಕೆಯ 52 ವರ್ಷದ ಮಗಳನ್ನು ವಿಚಾರಣೆಗೆ ಒಳಪಡಿಸಿದರು.
2008 ರಲ್ಲಿ ತನ್ನ ಪತಿ ಮೃತರಾಗಿದ್ದು, ಅಂತಿಮ ವಿಧಿ ವಿಧಾನಗಳನ್ನು ಗ್ರೀಕ್ ನಲ್ಲಿ ನಡೆಸಲಾಗಿತ್ತು. ಸ್ವಂತ ಸ್ಥಳವಾದ ಏಷ್ಯಾ ಖಂಡದ ಅರ್ಮೇನಿಯಾಗೆ ಪತಿಯ ಅಸ್ಥಿಯನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ವಿವರಿಸಿದ್ದಾರೆ. ಇದಕ್ಕೆ ಕಾನೂನಿನಲ್ಲೂ ಅವಕಾಶವಿದ್ದು, ಅಪರಾಧವಲ್ಲ ಎಂಬುದನ್ನು ವಕೀಲರ ಮೂಲಕ ಖಾತ್ರಿಪಡಿಸಿಕೊಂಡ ಪೊಲೀಸರು ಮುಂದಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ.