ಈಜುಕೊಳದಲ್ಲಿ ಸ್ಪ್ರಿಂಗ್ ಬೋರ್ಡ್ ನಿಂದ ಗಿರಕಿ ಹೊಡೆದು ಡೈವ್ ಮಾಡಿದ ಯುವತಿಯ ವಿಗ್ ಎಗರಿ ಬಿದ್ದಿದೆ.
ಟ್ವಿಟ್ಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಬಿದ್ದು ಬಿದ್ದು ನಗುವಂತೆ ಮಾಡುತ್ತದೆ.
ಸ್ವಿಮ್ಮಿಂಗ್ ಪೂಲ್ ನಲ್ಲಿ ಗೆಳತಿ ಡೈವ್ ಮಾಡುವುದನ್ನು ವಿಡಿಯೋ ಮಾಡುತ್ತಿದ್ದ ಹೆಂಗೆಳೆಯರ ಗುಂಪು, ಆಕೆಯನ್ನು ಪ್ರೋತ್ಸಾಹಿಸುತ್ತಾ ಇರುತ್ತದೆ. ಕಮ್ ಆನ್, ಡೈವ್ ಎಂದೆಲ್ಲ ಉತ್ಸಾಹ ತುಂಬುತ್ತಾ ಇರುತ್ತದೆ.
ಸ್ಪ್ರಿಂಗ್ ಬೋರ್ಡ್ ಮೇಲೆ ನಿಂತಿದ್ದ ಯುವತಿ, ಎಗರಿ ಗಿರಕಿ ಹೊಡೆದು ನೀರಿಗೆ ಡೈವ್ ಹೊಡೆಯುತ್ತಾಳೆ. ಆಕೆಯ ತಲೆ ಮೇಲೆ ಕೂತಿದ್ದ ವಿಗ್ ಕಳಚಿ ಬಿದ್ದು, ಸ್ಪ್ರಿಂಗ್ ಬೋರ್ಡ್ ಗೆ ಕಚ್ಚಿಕೊಳ್ಳುತ್ತದೆ. ವಿಡಿಯೋ ಮಾಡುತ್ತಿದ್ದ ಗೆಳತಿಯರು ಜೋರಾಗಿ ನಕ್ಕು ಹಾಸ್ಯ ಮಾಡುತ್ತಾರೆ.
ವಿಡಿಯೋ ವೀಕ್ಷಿಸಿದ ಅನೇಕರು, ಎಡವಟ್ಟು ಅಥವಾ ಆಕಸ್ಮಿಕ ಘಟನೆಗಳಲ್ಲಿ ವಿಗ್ ಕಳಚಿ ಪೇಚಿಗೆ ಸಿಲುಕಿದವರ ಇನ್ನಷ್ಟು ವಿಡಿಯೋಗಳನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ.