
ವಿಮಾನ ಕಿಟಕಿಯಿಂದ ಆಚೆಗೆ ನೋಡಿದಾಗ ಭೂಮಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಬಹಳಷ್ಟು ಮಂದಿ ಭೂಮೇಲ್ಮೈನ ಪಕ್ಷಿನೋಟದ ದೃಶ್ಯಗಳನ್ನು ನೋಡಿ ಖುಷಿ ಪಟ್ಟರೆ ಇಲ್ಲೊಬ್ಬ ಮಹಿಳೆಯ ಕಣ್ಣಿಗೆ ಅತ್ಯಪರೂಪದ ದೃಶ್ಯವೊಂದು ಕಣ್ಣಿಗೆ ಬಿದ್ದಿದೆ.
ಸಾಂಟಾ ಬಾರ್ಬರಾ ಕಡಲ್ಗಾಲುವೆ ಮೇಲೆ ಹಾರಾಡುವ ವೇಳೆ ಟ್ವಿಟರ್ ಬಳಕೆದಾರರಾದ ಜಾಸ್ಮಿನ್ ಚಿಲ್ಡ್ರೆಸ್ ಅವರು ಸಮುದ್ರದ ಮೇಲೆ ತಿಮಿಂಗಿಲವೊಂದು ಚುರುಕಾಗಿ ಅಡ್ಡಾಡುತ್ತಿರುವ ಚಿತ್ರವೊಂದನ್ನು ಸೆರೆ ಹಿಡಿದಿದ್ದಾರೆ. ತಮ್ಮ ಕ್ಯಾಮೆರಾವನ್ನು ತಿಮಿಂಗಿಲದತ್ತ ಜೂಮ್ ಮಾಡಿ ಫ್ರೇಂನಲ್ಲಿ ಅದನ್ನು ಸೆರೆ ಹಿಡಿಯಲು ಸಫಲರಾಗಿದ್ದಾರೆ ಈ ಮಹಿಳೆ.
ವಿದ್ಯಾರ್ಥಿನಿಗೆ ಮತ್ತು ಬರುವ ಪಾನೀಯ ಕುಡಿಸಿ ಸಹಪಾಠಿಯಿಂದಲೇ ಲೈಂಗಿಕ ಕಿರುಕುಳ
ಕ್ಯಾಲಿಫೋರ್ನಿಯಾ ವಿವಿಯಲ್ಲಿ ಸಾಗರಿಕ ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿರುವ ಜಾಸ್ಮಿನ್ ಈ ದೃಶ್ಯ ಕಂಡಾಗ ಆದ ಆನಂದ ತಾಳಲಾರದೇ ತಿಮಿಂಗಿಲದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
https://twitter.com/tfetttt/status/1378126873725595648?ref_src=twsrc%5Etfw%7Ctwcamp%5Etweetembed%7Ctwterm%5E1378126873725595648%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fwoman-shares-picture-of-whale-she-spotted-from-plane-divides-netizens-7257200%2F