ಖುದ್ದು ತನ್ನದೇ ಮನೆಗೆ ಬೆಂಕಿ ಹಾಕಿದ ಮಹಿಳೆಯೊಬ್ಬರು ಅಲ್ಲಿಯೇ ಇದ್ದ ಲಾನ್ ಮೇಲೆ ಕುಳಿತು ರಿಲ್ಯಾಕ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಕಣ್ಣೆದುರೇ ಮನೆ ಹೊತ್ತಿ ಉರಿಯುತ್ತಿದ್ದರೂ ಸಹ ಲಾನ್ ಮೇಲೆ ಕುಳಿತು ಆರಾಮವಾಗಿ ನೋಡುತ್ತಿದ್ದರು.
ನೆರೆ ಮನೆಯ ಆವ್ರೆ ಹ್ಯಾಮ್ಮಂಡ್ ಹೆಸರಿನ ವ್ಯಕ್ತಿಯೊಬ್ಬರು ಈ ಮಹಿಳೆಯ ವಿಡಿಯೋವೊಂದನ್ನು ಸೆರೆ ಹಿಡಿದಿದ್ದಾರೆ. ಈ ಕೂಲ್ ಮಹಿಳೆ ಹಾಗೂ ಪಕ್ಕದ ಮನೆಯ ಮಹಿಳೆಯ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಮನೆಯೊಳಗೆ ಬಹಳಷ್ಟು ಕಡೆ ಹೊತ್ತಿ ಉರಿಯುತ್ತಿದ್ದರೂ, ಈ ವೇಳೆ ಮತ್ತೊಬ್ಬ ವ್ಯಕ್ತಿ ಮನೆಯ ಒಳಗೆ ಇದ್ದರೂ ಸಹ ಈ ಮಹಿಳೆ ಏನೂ ಆಗಿಯೇ ಇಲ್ಲವೆಂಬಂತೆ ಇರುವುದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ.
ಕೋವಿನ್ ಪೋರ್ಟಲ್ ನಲ್ಲಿ ಆಗಿದೆ ಮಹತ್ವದ ಬದಲಾವಣೆ
ಕೆಲ ಕ್ಷಣಗಳ ಬಳಿಕ, ಗೇಯ್ಲ್ ಮೆಟ್ವಾಲ್ಲಿ ಹೆಸರಿನ 47ರ ಹರೆಯದ ಈ ಮಹಿಳೆ ಆ ಜಾಗದಿಂದ ಹೊರನಡೆದಿದ್ದಾರೆ. ಆಕೆಯನ್ನು ಮೇರಿಲ್ಯಾಂಡ್ನ ನಾರ್ತ್ಈಸ್ಟ್ ಬರಾಕ್ನ ಪೊಲೀಸರು ಬಂಧಿಸಿದ್ದು, ಕೊಲೆ ಆರೋಪಪಟ್ಟಿ ಸಿದ್ದಪಡಿಸಿದ್ದಾರೆ.