ಫ್ಯಾಶನ್ ಪ್ರಿಯರು ಕೆಲವೊಮ್ಮೆ ಎಲ್ಲಕ್ಕಿಂತ ಭಿನ್ನವಾಗಿ ಕಾಣಬೇಕೆಂದು ಏನೇನೋ ಪ್ರಯತ್ನ ಪಡ್ತಾರೆ. ಈಗಾಗಲೇ ಇದಕ್ಕೆ ಉದಾಹರಣೆ ಎಂಬಂತೆ ಸಾಕಷ್ಟು ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಫ್ಯಾಷನ್ ವಿದ್ಯಾರ್ಥಿಯೊಬ್ಬರು ರೈಲ್ವೆಯ ಸೀಟುಗಳಲ್ಲಿ ಸಾಮಾಜಿಕ ಅಂತರದ ಸೂಚನೆ ನೀಡುವ ಕವರ್ಗಳನ್ನ ಕ್ರಾಪ್ ಟಾಪ್ ಆಗಿ ಬಳಕೆ ಮಾಡಿದ್ದಾರೆ.
ಈಕೆ ಈ ಕ್ರಾಪ್ ಟಾಪ್ಗಳನ್ನ ತಾನು ಧರಿಸಿದ್ದು ಮಾತ್ರವಲ್ಲದೇ ಶಾಪಿಂಗ್ ಅಪ್ಲಿಕೇಶನ್ ಮೂಲಕ ಮಾರಾಟ ಮಾಡಿದ್ದಾಳೆ. ಬಳಿಕ ಈಕೆ ಗ್ರಾಹಕರಿಗೆ ಹಣವನ್ನ ಮರುಪಾವತಿ ಮಾಡಿದ್ದಾಳೆ ಎಂದು ಬಿಬಿಸಿ ವರದಿ ಮಾಡಿದೆ.
ಅಂದಹಾಗೆ ಈಕೆ ಈ ಸೀಟ್ ಕವರ್ಗಳನ್ನ ಕದ್ದಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಲಂಡನ್ನ ಮೇರಿಲೆಬೊನ್ ನಿಲ್ದಾಣದಲ್ಲಿ ತಿರಸ್ಕಾರವಾಗಿದ್ದ ಸೀಟ್ ಕವರ್ಗಳನ್ನ ಸಂಗ್ರಹಿಸಿ ಈಕೆ ಈ ಕೆಲಸವನ್ನ ಮಾಡಿದ್ದಾಳೆ ಎನ್ನಲಾಗಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.