
ದಂತದ ಆರೋಗ್ಯ ಎನ್ನುವುದು ಬಹಳ ಮುಖ್ಯ. ದಂತದ ಆರೋಗ್ಯ ಸರಿಯಿಲ್ಲದೇ ಇದ್ದಲ್ಲಿ ಕೆಟ್ಟ ಉಸಿರು ಹಾಗೂ ಹಲ್ಲುಗಳು ಉದುರುವುದು ಮಾತ್ರವಲ್ಲದೇ ಹೃದ್ರೋಗದಂಥ ಗಂಭೀರ ಸಮಸ್ಯೆಗಳೂ ಸಹ ಎದುರಾಗುವ ಸಾಧ್ಯತೆಗಳು ಇವೆ.
ಹಳದಿಗಟ್ಟಿದ ಹಲ್ಲುಗಳಿಂದ ನಮ್ಮ ಆತ್ಮವಿಶ್ವಾಸವೇ ಅಡಗಿ ಹೋಗಿಬಿಡುವ ಸಾಧ್ಯತೆ ಇರುತ್ತದೆ. ಅದೃಷ್ಟವಶಾತ್ ನಮ್ಮಲ್ಲಿ ಬಹಳಷ್ಟು ಮಂದಿ ಅತ್ಯುತ್ತಮ ದಂತ ವೈದ್ಯರಿದ್ದು, ಅನೇಕ ಮಂದಿಯ ನಗುವನ್ನು ಮರಳಿ ತರುವಲ್ಲಿ ಸಫಲರಾಗಿದ್ದಾರೆ.
ದಾರಿತಪ್ಪಿದ ತಾಯಿ-ಮಗಳು: ದೈಹಿಕ ಶಿಕ್ಷಕನೊಂದಿಗೆ ಅಕ್ರಮ ಸಂಬಂಧ – ಪ್ರಿಯಕರನೊಂದಿಗೆ ಸೇರಿ ಘೋರಕೃತ್ಯ
ಫಿಲಡೆಲ್ಫಿಯಾದ ಬ್ರಿಟ್ನಿ ನೆಗ್ಲರ್ ಹೆಸರಿನ ಈ ಮಹಿಳೆಗೂ ಸಹ ಇಂಥದ್ದೇ ಒಬ್ಬ ಉತ್ತಮ ದಂತವೈದ್ಯರು ಸಿಕ್ಕಿದ್ದು ಆಕೆಯ ಆತ್ಮವಿಶ್ವಾಸವನ್ನು ಮರಳಿಸಿದ್ದಾರೆ. ಭಾರೀ ಡ್ರಗ್ ವ್ಯಸನದ ಕಾರಣದಿಂದ ತನ್ನ ಹಲ್ಲುಗಳನ್ನು ಕೊಳೆಯಿಸಿಕೊಂಡಿದ್ದ ನೆಗ್ಲರ್‌ಗೆ ಇದೀಗ ವೈದ್ಯರಿಂದ ಹೊಸ ಹಲ್ಲಿನ ಸೆಟ್ ಸಿಕ್ಕಿದೆ.
ನೆಗ್ಲರ್‌ಗೆ ಚಿಕಿತ್ಸೆ ಕೊಟ್ಟ ಡಾ. ವಿಲ್‌ಸ್ಟೀಡ್ ಇತ್ತೀಚೆಗೆ ನೆಗ್ಲರ್‌ರಂಥ ಅನೇಕ ಮಂದಿಗೆ ದಂತಸಂಬಂಧಿ ಸಮಸ್ಯೆಗಳನ್ನು ಗುಣಪಡಿಸಲು ನೆರವಾಗಿದ್ದಾರೆ.