ಐಫೋನ್ ಒಂದನ್ನು ಆರ್ಡರ್ ಮಾಡಿದ ಮಹಿಳೆಯೊಬ್ಬರು ಡೆಲಿವರಿಯಲ್ಲಿ ಬಂದ ಬಾಕ್ಸ್ ಅನ್ನು ತೆರೆದು ನೋಡಿದಾಗ ಅಚ್ಚರಿ ಕಾದಿತ್ತು. ಬಾಕ್ಸ್‌ನಲ್ಲಿ ಫೋನ್ ಬದಲಿಗೆ ಮುರಿದ ಟೈಲ್ ಒಂದು ಬಂದಿತ್ತು.
ಬ್ರಿಟನ್‌ನ ಲಂಕಾಶೈರ್‌ನ ಪ್ರೆಸ್ಟನ್ ನಿವಾಸಿಯಾದ ಒಲಿವಿಯಾ ಪಾರ್ಕಿನ್ಸನ್ ಹೆಸರಿನ ಈ ಮಹಿಳೆ ತಮಗಾಗಿ ಐಫೋನ್ 12 ಪ್ರೋಮ್ಯಾಕ್ಸ್ ಆರ್ಡರ್ ಮಾಡಿಕೊಂಡಿದ್ದರು. ಏಪ್ರಿಲ್ 14ರಂದು ತಮಗೆ ಬಂದ ಬಾಕ್ಸ್ ತೆರೆದು ನೋಡಿದ ಒಲಿವಿಯಾ ಫೋನ್ ಬದಲಿಗೆ ಮುರಿದ ಟೈಲ್ ಒಂದನ್ನು ಕಂಡು ದಂಗು ಬಡಿದಿದ್ದಾರೆ.
“ಹೊಸ ಫೋನ್ ಬರುತ್ತದೆ ಎಂಬ ಉತ್ಸಾಹದಲ್ಲಿರುವ ದಿನವೇ ಹೀಗೆ ಆದರೆ……ಐಫೋನ್ 12 ಪ್ರೋಮ್ಯಾಕ್ಸ್ ಯಾವುದು? ಇದಲ್ಲದೇ, @virginmedia ನನ್ನೊಂದಿಗೆ ಸಂಪರ್ಕಕ್ಕೆ ಬರಲು 3-5 ಕೆಲಸದ ದಿನಗಳು ಬೇಕಂತೆ. ಇದೊಂದು ಜೋಕಾ?” ಎಂದು ಕ್ಯಾಪ್ಷನ್ ಬರೆದು ಫೋನ್‌ನ ಚಿತ್ರಗಳೊಂದಿಗೆ ಪೋಸ್ಟ್ ಮಾಡಿದ್ದಾರೆ ಒಲಿವಿಯಾ.
ಮೃತ ವ್ಯಕ್ತಿಗಳ ಹೆಸರಲ್ಲೂ ಬೆಡ್ ಮುಂದುವರಿಕೆ; ಖಾಸಗಿ ಆಸ್ಪತ್ರೆಗಳ ಕಣ್ಣಾಮುಚ್ಚಾಲೆ ಆಟಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಸಚಿವರು
ಒಲಿವಿಯಾ ವಂಚನೆಯೊಂದರ ಸಂತ್ರಸ್ತೆಯಾಗಿದ್ದಾರೆ ಎಂದು ವರ್ಜಿನ್ ಮೀಡಿಯಾ ಒಪ್ಪಿಕೊಂಡರೂ ಸಹ, ತನಗೆ ಬಂದ ಟೈಲ್‌ಗೆ ದುಡ್ಡು ಪಾವತಿ ಮಾಡಬೇಕೆಂದು ತಿಳಿಸುತ್ತಿರುವುದಾಗಿ ಒಲಿವಿಯಾ ಹೇಳಿಕೊಂಡಿದ್ದಾರೆ.
ವರ್ಜಿನ್ ಮೀಡಿಯಾದಿಂದ ಯಾವುದೇ ಉತ್ತರ ಬರದೇ 7 ದಿನಗಳು ತುಂಬಿದ ಬಳಿಕ, ಅವರು ತನಿಖೆ ನಡೆಸಿ, ತಪ್ಪು ಯಾರದ್ದೆಂದು ತಿಳಿಯಲು ಮುಂದಾದರು. ಹೊಸ ಫೋನ್ ಒಂದನ್ನು ಖರೀದಿ ಮಾಡಿದ ವಿಶ್ವಾಸಾರ್ಹ ಗ್ರಾಹಕರೊಬ್ಬರು ಅದಕ್ಕೆ ಪಾವತಿ ಮಾಡಲು ಹೊಣೆಗಾರರಾಗಿದ್ದಾರೆ. ʼʼವರ್ಜಿನ್ ಮೀಡಿಯಾ ನಾನು ಸ್ವೀಕರಿಸಿಯೇ ಇಲ್ಲದ ಫೋನ್‌ಗೆ ದುಡ್ಡು ಕೊಡುವಂತೆ ಮಾಡುತ್ತಿದ್ದಾರೆ. ಆದ್ದರಿಂದ ದಯವಿಟ್ಟು ಈ ವಿಚಾರವನ್ನು ರೀಟ್ವೀಟ್ ಮಾಡಿ, ಇದರಿಂದ ನನಗೆ ಕೊಂಚ ಸಹಾಯ ಸಿಗಬಹುದು. ಈ ಕಂಪನಿ ಅಥವಾ ಡೆಲಿವರಿ ಸೇವೆಯನ್ನು ಬಳಸಬೇಡಿ. ಈ ಕೆಳಗಿನ ಚಿತ್ರಗಳು, ನಾನು ಅವರಿಂದ ಏನು ’ಖರೀದಿ’ ಮಾಡಿದೆ ಎಂದು ತೋರುತ್ತವೆ. ರೇಜಿಗೆ ಹುಟ್ಟಿಸುವ ಕಂಪನಿಗಳು” ಎಂದು ಸಿಟ್ಟನ್ನು ಕಾರಿಕೊಂಡಿದ್ದಾರೆ ಒಲಿವಿಯಾ.