ಕೋವಿಡ್ 19ನಿಂದ ಮೃತರಾದರು ಎಂದು ಘೋಷಿಸಲ್ಪಟ್ಟಿದ್ದ ಮಹಿಳೆ, ಕೆಲ ದಿನಗಳ ಬಳಿಕ ಆಸ್ಪತ್ರೆಯಲ್ಲಿ ಎಚ್ಚರಗೊಂಡು ತಬ್ಬಿಬ್ಬು ಮಾಡಿದ್ದಾರೆ.
ಈಕ್ವೆಡೋರನ್ 74 ವರ್ಷದ ಅಲ್ಬಾ ಮಾರುರಿ ಎಂಬುವರು ಉಸಿರಾಟದ ತೊಂದರೆ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು.
ಮೂರು ವಾರ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರು ಮಾರ್ಚ್ 27ರಂದು ನಿಧನರಾದರೆಂದು ಆಸ್ಪತ್ರೆ ಘೋಷಿಸಿತ್ತು. ಒಂದು ವಾರದ ನಂತರ ಆಕೆಯ ಕುಟುಂಬಕ್ಕೆ ಶವವನ್ನು ತೋರಿಸಲಾಗಿತ್ತು. ಕೊರೋನ ವೈರಸ್ ಸಾಂಕ್ರಾಮಿಕ ಭಯದಿಂದ ಯಾರೂ ಶವದ ಬಳಿ ಸಮೀಪಿಸಿರಲಿಲ್ಲ. ಶವದ ಹಿಂಭಾಗವನ್ನು ಗಮನಿಸಿ ಕುಟುಂಬದವರು ಆಕೆಯೇ ಎಂದಿದ್ದರು. ಬಳಿಕ ಅದರ ಶವಸಂಸ್ಕಾರ ಸಹ ಸುರಕ್ಷತಾ ಕ್ರಮಗಳೊಂದಿಗೆ ದೂರದಿಂದಲೇ ನಡೆದಿತ್ತು.
ಆದರೆ ಕಳೆದ ಗುರುವಾರ ಮಾರುರಿಗೆ ಪ್ರಜ್ಞೆ ಬಂದಿದೆ. ತನ್ನ ಸಹೋದರಿಯ ಹೆಸರು ಕರೆದಿದ್ದಾರೆ. ಬಳಿಕ ಆಕೆಯ ಮನೆಗೂ ಸುದ್ದಿ ಮುಟ್ಟಿಸಲಾಯಿತು. ಶವವನ್ನು ಅಂದು ಗುರುತಿಸಿದ್ದ ಸಂಬಂಧಿ, ಆಕೆಯ ಕೂದಲು ಮತ್ತು ಗಾಯದ ಕಲೆಯನ್ನು ನೋಡಿ ನನ್ನ ಸಂಬಂಧಿ ಎಂದು ಅಂದುಕೊಂಡಿದ್ದೆ. ಆಕೆಯ ಮುಖ ನೋಡಲು ಭಯವಾಗಿತ್ತು ಎಂದು ಹೇಳಿಕೆ ಕೊಟ್ಟಿದ್ದಾರೆ. ಇದೀಗ ಕುಟುಂಬದವರು ಆಸ್ಪತ್ರೆ ವಿರುದ್ಧ ಹರಿಹಾಯ್ದಿದ್ದಾರೆ.