ಸ್ಕಾಟ್ಲೆಂಡ್ ನಲ್ಲಿ 9 ತಿಂಗಳು ಮಹಿಳೆಯೊಬ್ಬಳು ಗರ್ಭಿಣಿ ಎಂಬ ನಾಟಕವಾಡಿದ್ದಾಳೆ. ಹೊಟ್ಟೆಯಲ್ಲಿ ಮಗುವಿದೆ ಎಂದು ಬಾಯ್ ಫ್ರೆಂಡ್ ಗೆ ಮಹಿಳೆ ಸುಳ್ಳು ಹೇಳಿದ್ದಾಳೆ. ನಕಲಿ ಬೇಬಿ ಬಂಪ್ ತೋರಿಸಿ ಮಹಿಳೆ ಮೋಸ ಮಾಡಿದ್ದಾಳೆ. ಮಹಿಳೆಯ ಈ ನಾಟಕಕ್ಕೆ ಕಾರಣವೇನು ಎಂಬುದು ಕೂಡ ಆಸಕ್ತಿದಾಯಕವಾಗಿದೆ.
ಜಾಕ್ವೆಲಿನ್ ಮೆಕ್ಗೊವನ್ ಎಂಬ ಮಹಿಳೆ ಮಾಜಿ ಪ್ರೇಮಿ ಜೇಮೀ ಇಟ್ಕೆನ್ ಗೆ ಆಸ್ಪತ್ರೆಗೆ ಹೋಗಿದ್ದ ದಾಖಲೆಗಳನ್ನೂ ನೀಡಿದ್ದಳು. ಜೇಮೀ, ಜಾಕ್ವೆಲಿನ್ ಗರ್ಭಿಣಿ ಎಂದೇ ನಂಬಿದ್ದ. ಮಾರ್ಚ್ 20, 2020ರಲ್ಲಿ ಹೆರಿಗೆಯಾಗುತ್ತೆ. ಹೆರಿಗೆ ನಂತ್ರ ಮೊಮ್ಮಗುವನ್ನು ನೀವು ನೋಡಿಕೊಳ್ಳಬೇಕೆಂದು ಜೀಮೀ ತಾಯಿಗೆ ಜಾಕ್ವೆಲಿನ್ ಹೇಳಿದ್ದಳು.
ಚಲಿಸುವ ರೈಲು ಹತ್ತಲು ಹೋದ ವಿಕಲಚೇತನ ಆಮೇಲೇನಾಯ್ತು…..?
ಜೋಕಾಲಿ ಫೋಟೋ ಒಂದನ್ನು ಜೀಮೀಗೆ ಕಳುಹಿಸಿದ ಜಾಕ್ವೆಲಿನ್ 2, 99, 888 ರೂಪಾಯಿ ಕೇಳಿದ್ದಾಳೆ. ನಂತ್ರ ಗರ್ಭಪಾತವಾಗಿದೆ ಎಂದು ಜೀಮೀಗೆ ಸಂದೇಶ ಕಳುಹಿಸಿದ್ದಾಳೆ. ಅಷ್ಟೆ ಅಲ್ಲ ಆತನ ತಾಯಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದ್ರಿಂದ ನೊಂದ ಜೀಮೀ ಕೋರ್ಟ್ ಮೊರೆ ಹೋಗಿದ್ದ. ಕೋರ್ಟ್ ನಲ್ಲಿ ಜಾಕ್ವೆಲಿನ್ ತಪ್ಪೊಪ್ಪಿಕೊಂಡಿದ್ದಾಳೆ. 9 ತಿಂಗಳು ಜೀಮೀ ಹಾಗೂ ಆಕೆ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡಿದ್ದೇನೆ. ಗರ್ಭಿಣಿ ಹೆಸರಿನಲ್ಲಿ ಹಣ ಕಿತ್ತುಕೊಂಡಿದ್ದೇನೆಂದು ಜಾಕ್ವೆಲಿನ್ ಹೇಳಿದ್ದಾಳೆ. ವಿಚಾರಣೆ ಪೂರ್ಣಗೊಳಿಸಿದ ಕೋರ್ಟ್ ಜಾಕ್ವೆಲಿನ್ ಅಪರಾಧಿ ಎಂದು ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣ ಸದ್ಯವೇ ಪ್ರಕಟವಾಗಲಿದೆ.