ತನಗೆ ಹೆರಿಗೆ ನೋವು ಬಂದಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಲು ವಿಫಲಳಾದ ಗರ್ಭಿಣಿಯೊಬ್ಬಳು ಶೌಚಾಲಯಕ್ಕೆ ತೆರಳಿ ಮಗುವಿಗೆ ಜನ್ಮ ನೀಡಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
22 ವರ್ಷದ ಬಿಲ್ಲಿ ವಾರ್ಡ್ ಎಂಬ ಗರ್ಭಿಣಿಗೆ ವಿಚಿತ್ರವಾದ ಅನುಭವಾಗಿದೆ. ತನಗೆ ಶೌಚಕ್ಕೆ ಹೋಗಲು ಈ ರೀತಿ ದೇಹದಲ್ಲಿ ನೋವು ಬರ್ತಿದೆ ಎಂದು ಅರ್ಥೈಸಿಕೊಂಡ ಮಹಿಳೆ ಶೌಚಾಲಯಕ್ಕೆ ತೆರಳಿದ್ದಾರೆ. ಆದರೆ ಕ್ರಮೇಣ ಈ ನೋವು ಹೆಚ್ಚಾಗಿದ್ದು ಬಿಲ್ಲಿ ತುರ್ತು ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ.
ಆದರೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ಬಿಲ್ಲಿಯನ್ನ ಆಸ್ಪತ್ರೆಗೆ ಸೇರಿಸೋಕೆ ಆಗದ ಕಾರಣ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಸ್ನಾನಗೃಹದಲ್ಲಿ ವೈದ್ಯರು ಮಗುವನ್ನ ಉಪಚರಿಸುತ್ತಿರುವ ವೇಳೆ ಬಿಲ್ಲಿ ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡಿದ್ದಾರೆ.