ಕೆಲವೊಮ್ಮೆ ಜೀವನದಲ್ಲಿ ಎಂಥಾ ವಿಚಿತ್ರ ಸನ್ನಿವೇಶಗಳು ಎದುರಾಗುತ್ತವೆ ಅಂದರೆ ನಿಮಗೆ ಅದನ್ನ ನೆನೆಸಿಕೊಂಡು ನಗಬೇಕೋ ಇಲ್ಲವೇ ಮುಜುಗರ ಪಡಬೇಕೋ ಅನ್ನೋದೇ ಅರ್ಥವಾಗೋದಿಲ್ಲ. ಇಂತಹದ್ದೇ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಲಿಜಿಬೆತ್ ಎಂಬ ಹೆಸರಿನ ಟಿಕ್ಟಾಕ್ ಖಾತೆಯಲ್ಲಿ ಈ ವಿಡಿಯೋವನ್ನ ಶೇರ್ ಮಾಡಲಾಗಿದೆ. ರೆಸ್ಟಾರೆಂಟ್ ಒಂದರಲ್ಲಿ ಸ್ನೇಹಿತರ ಜೊತೆ ಹುಟ್ಟು ಹಬ್ಬವನ್ನ ಸಂಭ್ರಮಿಸೋಕೆ ತೆರಳಿದ್ದ ವೇಳೆ ಎಲೆಜಬೆತ್ಗೆ ಈ ಅನುಭವ ಉಂಟಾಗಿದೆ.
ಆಕೆ ಎದ್ದು ನಿಂತ ವೇಳೆಯಲ್ಲಿ, ಅದೇ ಹೋಟೆಲ್ನ ವೇಟರ್ ಆಕೆಯ ಕಡೆಗೆ ನಗೆ ಬೀರುತ್ತಾ ನಡೆದುಕೊಂಡು ಬರ್ತಾನೆ. ಆಕೆ ಬಹುಶಃ ಆತ ನನಗೆ ಜನ್ಮ ದಿನದ ಶುಭಾಶಯ ಹೇಳಲು ಬಂದಿರಬಹುದು ಎಂದು ಭಾವಿಸುತ್ತಾಳೆ. ಆಕೆ ಆತನನ್ನ ಆಲಂಗಿಸಿಕೊಳ್ತಾಳೆ. ಆದರೆ ಅವನು ಮಾತ್ರ ಅಲ್ಲೇ ಆಕೆಯ ಹಿಂಬದಿ ಟೇಬಲ್ನಲ್ಲಿದ್ದ ಮೇಣದಬತ್ತಿಯನ್ನ ತೆಗೆದುಕೊಂಡು ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಆಕೆಯ ಮುಜುಗರಕ್ಕೆ ಕಾರಣವಾದ ಈ ವಿಡಿಯೋ ಟಿಕ್ಟಾಕ್ನಲ್ಲಿ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳಲ್ಲೂ ಸಖತ್ ವೈರಲ್ ಆಗಿದೆ.
https://youtu.be/BBBWvN1hkmc