ಹೆರಿಗೆಯಾದ ಬಳಿಕ ಕೋಮಾಗೆ ಜಾರಿದ್ದ ತಾಯಿ ಬರೋಬ್ಬರಿ ಮೂರು ತಿಂಗಳ ಬಳಿಕ ತನ್ನ ಕಂದಮ್ಮನ ಮುಖವನ್ನ ನೋಡಿದ ಅಪರೂಪದ ಘಟನೆ ಅಮೆರಿಕದ ವಿಸ್ಕೋನ್ಸಿನ್ ಎಂಬಲ್ಲಿ ನಡೆದಿದೆ. ಕೇಸ್ಲೆ ಟೌನ್ಸೆಂಡ್ ಎಂಬ ತಾಯಿ ತನ್ನ ಮಗು ಲೂಸಿಯ ಮುಖವನ್ನ ಮೂರು ತಿಂಗಳ ಬಳಿಕ ನೋಡಿದ್ದಾರೆ.
ನಾಲ್ಕನೇ ಮಗುವಿಗೆ ಗರ್ಭ ಧರಿಸಿದ್ದ ಕೆಸ್ಲೆ ಕಳೆದ ವರ್ಷ ನವೆಂಬರ್ 4ರಂದು ಸಿ ಸೆಕ್ಷನ್ ಮೂಲಕ ಲ್ಯೂಸಿಗೆ ಜನ್ಮ ನೀಡಿದ್ದಳು. ಆದರೆ ಆಕೆಗೆ ಕೊರೊನಾ ಇದ್ದಿದ್ದರಿಂದ ಕೋಮಾಗೆ ಜಾರಿದ್ದಾಳೆ. ಬರೋಬ್ಬರಿ 75 ದಿನಗಳ ಕಾಲ ಕೆಸ್ಲೆಯನ್ನ ಕೃತಕ ಆಮ್ಲಜನಕವನ್ನ ಹಾಕಿ ಬದುಕಿಸಲಾಗಿತ್ತು. ಜನವರಿ 27ರಂದು ಗುಣಮುಖಳಾದ ಕೆಸ್ಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ತನ್ನ ಕಂದಮ್ಮನ ಮುಖವನ್ನ ನೋಡಿದ್ದಾಳೆ.
ನಾವು ಒಬ್ಬರನ್ನೊಬ್ಬರು ನೋಡುತ್ತಿದ್ದಂತೆಯೇ ನಮ್ಮಿಬ್ಬರಲ್ಲಿ ವಿಶೇಷ ಬಂಧ ಬೆಸೆದಿದೆ. ಆಕೆ ನನ್ನನ್ನ ನೋಡಿ ನಕ್ಕಿದ್ದಾಳೆ. ಆಕೆ ನನ್ನನ್ನ ನೋಡುತ್ತಿದ್ದ ರೀತಿ ಹೇಗಿತ್ತು ಅಂದ್ರೆ ಆಕೆ ನನ್ನನ್ನ ಮೊದಲ ಬಾರಿ ಭೇಟಿಯಾದಂತೆ ಇರಲಿಲ್ಲ ಹಾಗೂ ಆಕೆ ನನ್ನನ್ನ ಬಹಳ ದಿನಗಳಿಂದ ಬಲ್ಲವಳಂತೆ ನೋಡಿದ್ಲು. ನನಗೆ ತುಂಬಾನೇ ಖುಷಿಯಾಗಿದೆ ಎಂದು ಕೆಸ್ಲೆ ಸಂತಸ ವ್ಯಕ್ತಪಡಿಸಿದ್ದಾಳೆ.