ವೃತ್ತಾಕಾರವಾಗಿ ಕೇಕ್ಗಳನ್ನ ತಯಾರಿಸುವ ವಿಧಾನ ಹಳೆಯದಾಯ್ತು. ಈಗೇನಿದ್ದರೂ ಯಾವುದಾದರೊಂದು ವಸ್ತುವನ್ನ ಕಲ್ಪಿಸಿಕೊಂಡು ಅದೇ ರೀತಿ ಕೇಕ್ ತಯಾರಿಸುವ ಟ್ರೆಂಡ್ ನಡೀತಾ ಇದೆ. ಗೊಂಬೆ, ಸ್ಪೋರ್ಟ್ಸ್ ಶೂ, ಚಿಪ್ಸ್ ಇವೆಲ್ಲ ಸಾಲದು ಅಂತಾ ಟಾಯ್ಲೆಟ್ ಪೇಪರ್ಗಳನ್ನ ಹೋಲುವ ಕೇಕ್ಗಳು ಇವಾಗ ಮಾರುಕಟ್ಟೆಯಲ್ಲಿ ಸಿಗುತ್ತವೆ.
ಇದೇ ರೀತಿ ಪ್ಲಾನ್ ಒಂದನ್ನ ಅಳವಡಿಸಿಕೊಂಡ ತಾಯಿಯೊಬ್ಬರು ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಕುಟುಂಬದ ಸದಸ್ಯರಿಗೆ ಟ್ರಿಕ್ಕಿ ಫುಡ್ ಒಂದನ್ನ ಸರ್ವ್ ಮಾಡಿದ್ದಾರೆ. ಸ್ಕಾಟಿಶ್ನ ಸಾಂಪ್ರದಾಯಿಕ ಖಾದ್ಯಗಳಾದ ಹಗ್ಗೀಸ್, ಟ್ಯಾಟೀಸ್ ಹಾಗೂ ನೀಪ್ಗಳ ಮಾದರಿಯಲ್ಲಿ ಕೇಕ್ ತಯಾರಿಸಿ ಮಕ್ಕಳು ಹಾಗೂ ಪತಿಯನ್ನ ಆಶ್ಚರ್ಯ ಪಡುವಂತೆ ಮಾಡಿದ್ದಾರೆ.
ಹಗ್ಗೀಸ್ ಖಾದ್ಯವನ್ನ ಮಾಂಸದಿಂದ ತಯಾರು ಮಾಡಲಾಗುತ್ತೆ. ಟ್ಯಾನೀಸ್ಗಳನ್ನ ಆಲೂಗಡ್ಡೆ ಬಳಸಿ ತಯಾರಿಸಲಾಗುತ್ತೆ. ಅಲ್ಲದೇ ಈ ಎಲ್ಲ ಆಹಾರ ಪದಾರ್ಥಗಳು ಖಾರದ ತಿನಿಸುಗಳ ಸಾಲಿನಲ್ಲಿ ಸೇರುತ್ತವೆ.
48 ವರ್ಷದ ಯವೊನೆ ಕ್ಯಾಡೆನ್ ತನ್ನ ಪತಿ ಹಾಗೂ ಮಕ್ಕಳಿಗೆ ಈ ಸಾಂಪ್ರದಾಯಿಕ ಖಾದ್ಯವನ್ನ ಬಡಿಸಿದ್ದಾರೆ. ಆದರೆ ಇದು ಸಾಂಪ್ರದಾಯಿಕ ಖಾದ್ಯದ ರೂಪದಲ್ಲಿರುವ ಚಾಕೊಲೆಟ್ ಕೇಕ್ ಎಂಬ ವಿಚಾರ ಗೊತ್ತಾದಾಗ ಪತಿ ಹಾಗೂ ಮಕ್ಕಳು ಆಶ್ಚರ್ಯಚಕಿತರಾಗಿದ್ದಾರೆ.