ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಮೊದಲ ಡೇಟ್ಗೆ ಹೋಗೋದು ಅಂದರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದಿರಲ್ಲ. ಮೊದಲ ಡೇಟ್ ಅಚ್ಚುಕಟ್ಟಾಗಿ ಇರಬೇಕು ಅಂತಾ ಅನೇಕರು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ಪಡುತ್ತಾರೆ.
ಅಮೆರಿಕದ ಎಮಿಲಿ ಟೆಡ್ಫೋರ್ಡ್ ಸಿಕ್ಸ್ ಫ್ಲಾಗ್ ಥೀಮ್ ಪಾರ್ಕ್ಗೆ ತನ್ನ ಮೊದಲ ಡೇಟ್ಗಾಗಿ ತೆರಳಿದ್ದಳು. ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಪಾರ್ಕ್ನಲ್ಲಿ ಮಾಸ್ಕ್ ಧರಿಸೋದು ಕಡ್ಡಾಯವಾಗಿತ್ತು.
ಮೊದಲ ಡೇಟ್ಗೆಂದು ಚೆನ್ನಾಗಿ ಮೇಕಪ್ ಮಾಡಿಕೊಂಡಿದ್ದ ಎಮಿಲಿ ಕೂಡ ಫುಲ್ ಖುಶ್ ಆಗಿದ್ದಳು. ಆದರೆ ಈ ಮಾಸ್ಕ್ ಆಕೆಯ ಗಾಢ ಬಣ್ಣದ ಲಿಪ್ಸ್ಟಿಕ್ನ್ನು ಮುಖಕ್ಕೆಲ್ಲ ಹಬ್ಬುವಂತೆ ಮಾಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಎಮಿಲಿ ತನ್ನ ಮೇಕಪ್ ಬಗ್ಗೆ ತಾನೇ ಅಪಹಾಸ್ಯ ಮಾಡಿಕೊಂಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
https://youtu.be/a3FNS378X5k?t=1