alex Certify ವರನ ಪರೀಕ್ಷೆಗಾಗಿ ಕುಟುಂಬದ 21 ಸದಸ್ಯರೊಂದಿಗೆ ತೆರಳಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರನ ಪರೀಕ್ಷೆಗಾಗಿ ಕುಟುಂಬದ 21 ಸದಸ್ಯರೊಂದಿಗೆ ತೆರಳಿದ ಯುವತಿ

ಲವರ್ಸ್​ಗಳು ಡೇಟ್​ ಮಾಡ್ತಾರೆ ಅನ್ನೋ ಮಾತನ್ನ ಕೇಳಿರ್ತಿರಾ. ಪರಸ್ಪರ ಪ್ರೀತಿಸಿಕೊಳ್ತಾ ಇರೋರು ಏಕಾಂತವನ್ನ ಎಂಜಾಯ್​ ಮಾಡೋಕೆ ಹೀಗೆ ಡೇಟ್​ಗೆ ಹೋಗ್ತಾರೆ. ಆದರೆ ನೀವೆಂದೂ ನೋಡೇ ಇರದ ವ್ಯಕ್ತಿ ಜೊತೆ ನಿಮಗೆ ನಿಶ್ಚಿತಾರ್ಥವಾದ್ರೆ ಅಂತವರ ಜೊತೆ ಹೊರಗೆ ಸುತ್ತೋದನ್ನ ಬ್ಲೈಂಡ್ ಡೇಟ್​ ಅಂತಾ ಕರೆಯಲಾಗುತ್ತೆ .

ನಮಗೆ ಗೊತ್ತೇ ಇಲ್ಲದ ವ್ಯಕ್ತಿ ಜೊತೆ ಸುತ್ತಾಡಬೇಕು ಅಂದ್ರೆ ಯಾರಿಗಾದ್ರೂ ಅಳುಕು, ಹಿಂಜರಿಕೆ ಇರೋದು ಸಹಜ. ಅದರಲ್ಲೂ ಹೆಣ್ಣು ಮಕ್ಕಳಂತೂ ಭಯದಲ್ಲೇ ಹೋಗ್ತಾರೆ. ಆದರೆ ಮದುವೆಗೂ ಮುನ್ನ ಈ ರೀತಿ ಸುತ್ತಾಡಿದ್ರೆ ಮಾತ್ರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋಕೆ ಸಾಧ್ಯ. ಹೀಗಾಗಿ ಚೀನಾದಲ್ಲಿ ಒಬ್ಬ ಮಹಿಳೆ ತನ್ನ 23 ಕುಟುಂಬ ಸದಸ್ಯರೊಂದಿಗೆ ಬ್ಲೈಂಡ್​ ಡೇಟ್​​ಗೆ ಹೋಗಿ ಸುದ್ದಿಯಾಗಿದ್ದಾಳೆ.

ತಾನು ಮದುವೆಯಾಗೋ ಹುಡುಗ ಎಷ್ಟು ಉದಾರಿ..? ಆತನ ಗುಣಮಟ್ಟ ಏನು ಅಂತಾ ತಿಳಿದುಕೊಳ್ಳೋಕೆ ಹುಡುಗಿ ಈ ರೀತಿಯ ಪ್ಲಾನ್​ ಮಾಡಿದ್ದಾಳೆ. ಒಂದಿಡೀ ದಿನವನ್ನ ಹುಡುಗಿ ಹಾಗೂ ಆಕೆಯ ಕುಟುಂಬಸ್ಥರೊಂದಿಗೆ ಕಳೆದ ಯುವಕ ಹೋಟೆಲ್​ ಬಿಲ್​ ಅಂತಾನೇ ಬರೋಬ್ಬರಿ 20,000 ಯೆನ್​ ಅಥವಾ 14074 ರೂಪಾಯಿಯನ್ನ ಪಾವತಿಸಿದ್ದಾನಂತೆ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...