ಐ ಡ್ರಾಪ್ ಎಂದುಕೊಂಡು ನೇಲ್ ಗ್ಲೂವನ್ನ ಕಣ್ಣಿಗೆ ಹಾಕಿಕೊಂಡ ಮಹಿಳೆ ಕಣ್ಣು ತೆರೆಯಲು ಪಡಬಾರದ ಕಷ್ಟ ಪಟ್ಟ ಘಟನೆ ಮಿಚಿಗನ್ನಲ್ಲಿ ನಡೆದಿದೆ.
ಕ್ಯಾಂಟಾಕ್ಟ್ ಲೆನ್ಸ್ ಹಾಕಿಕೊಂಡೇ ನಿದ್ದೆ ಹೋಗಿದ್ದ ಮಹಿಳೆಗೆ ರಾತ್ರಿ 1 ಗಂಟೆ ಸುಮಾರಿಗೆ ಎಚ್ಚರವಾಗಿದೆ. ಈ ವೇಳೆ ಕ್ಯಾಂಟಾಕ್ಟ್ ಲೆನ್ಸ್ ತೆಗೆಯಲು ಮುಂದಾಗಿದ್ದಾಳೆ.
ಪರ್ಸ್ನೆಲ್ಲ ಹುಡುಕಾಡಿದ ಮಹಿಳೆ ಐ ಡ್ರಾಪ್ಸ್ ಎಂದುಕೊಂಡು ನೇಲ್ಗ್ಲೂವನ್ನು ಎತ್ತಿಕೊಂಡಿದ್ದಾಳೆ.
ಕರ್ಫ್ಯೂ ಹೊತ್ತಲ್ಲಿ ಮಾನವೀಯತೆ ಮೆರೆದ ಯುವ ಕಾಂಗ್ರೆಸ್ ಕಾರ್ಯಕರ್ತರು
ಕಣ್ಣಿನಲ್ಲಿ ಉರಿಯಾಗಲು ಶುರುವಾದ ಮೇಲೆ ಆಕೆಗೆ ಇದು ಐ ಡ್ರಾಪ್ ಅಲ್ಲ ಎಂದು ಅರಿವಾಗಿದೆ. ಕಣ್ಣಿನಲ್ಲಿ ತುರಿಕೆ ಆರಂಭವಾಗ್ತಿದ್ದಂತೆಯೇ ಆಕೆ ಪತಿಯ ಬಳಿ ತುರ್ತು ಸೇವೆಗೆ ಕರೆ ಮಾಡುವಂತೆ ಹೇಳಿದ್ದಾಳೆ.