alex Certify 10 ಮಕ್ಕಳನ್ನು ಹೆತ್ತ ಮಹಾತಾಯಿಗೆ ಇನ್ನೂ ಇಬ್ಬರು ಬೇಕಂತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ಮಕ್ಕಳನ್ನು ಹೆತ್ತ ಮಹಾತಾಯಿಗೆ ಇನ್ನೂ ಇಬ್ಬರು ಬೇಕಂತೆ…!

ಕಳೆದ 10 ವರ್ಷಗಳಲ್ಲಿ 10 ಮಕ್ಕಳಿಗೆ ಜನ್ಮವಿತ್ತಿರುವ ಅಮೆರಿಕದ ಮಹಿಳೆಯೊಬ್ಬರಿಗೆ ಇನ್ನೂ ಇಬ್ಬರು ಮಕ್ಕಳು ಬೇಕಂತೆ…!

ಕರ್ಟ್ನಿ ರೋಜರ್ಸ್ ಹೆಸರಿನ 36 ವರ್ಷದ ಈ ಮಹಿಳೆ ತನ್ನ ಪತಿ ಕ್ರಿಸ್ ರೋಜರ್ಸ್ ಜೊತೆಗೆ 2008ರಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. 2010ರಲ್ಲಿ ಮೊದಲ ಮಗುವನ್ನು ಬರಮಾಡಿಕೊಂಡ ಈ ಜೋಡಿ, ಅಲ್ಲಿಂದ ಮುಂದಿನ 9 ವರ್ಷಗಳ ಕಾಲ 9 ಮಕ್ಕಳನ್ನು ಹುಟ್ಟಿಸಿದ್ದಾರೆ. ಇದೀಗ ತನ್ನ 11ನೇ ಮಗುವಿನ ನಿರೀಕ್ಷೆಯಲ್ಲಿರುವ ಕೋರ್ಟ್ನಿ, ನವೆಂಬರ್‌ 19ರಂದು ಡೆಲಿವರಿ ಡೇಟ್ ಪಡೆದುಕೊಂಡಿದ್ದಾರೆ.

ಸದ್ಯ ಜನಿಸಿರುವ ಹತ್ತು ಮಕ್ಕಳ ಪೈಕಿ ಆರು ಗಂಡು ಹಾಗೂ ನಾಲ್ಕು ಹೆಣ್ಣಾಗಿದ್ದು, ಇವರೆಲ್ಲ ಹೆಸರುಗಳು C ಅಕ್ಷರದಿಂದ ಆರಂಭವಾಗುತ್ತದೆ. ಗಂಡ-ಹೆಂಡತಿ ಸೇರಿದಂತೆ ಒಟ್ಟು 14 ಜನರ ಕುಟುಂಬ ಮಾಡಿಕೊಳ್ಳುವ ’ಫ್ಯಾಮಿಲಿ ಪ್ಲಾನಿಂಗ್’ ಈ ಜೋಡಿಯದ್ದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...